alex Certify ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸರ ದಾಳಿ; ಆರು ಯುವತಿಯರ ರಕ್ಷಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸರ ದಾಳಿ; ಆರು ಯುವತಿಯರ ರಕ್ಷಣೆ

ಶಿವಮೊಗ್ಗ ನಗರದ ಫ್ಯಾಮಿಲಿ ಸಲೂನ್‌ ಮತ್ತು ಸ್ಪಾ ಮೇಲೆ ದಾಳಿ ನಡೆಸಿರುವ ಪೊಲೀಸರು ಆರು ಯುವತಿಯರನ್ನು ರಕ್ಷಿಸಿದ್ದಾರೆ. ಹಣದ ಆಮಿಷವೊಡ್ಡಿ ಯುವತಿಯರನ್ನು ವೇಶ್ಯಾವಾಟಿಕೆಗೆ ಬಳಸುತ್ತಿರುವ ಆರೋಪದ ಮೇಲೆ ಈ ದಾಳಿ ನಡೆಸಲಾಗಿತ್ತು.

ಕುವೆಂಪು ರಸ್ತೆಯ ಸಾಯಿ ಆರ್ಕೆಡ್‌ ನಲ್ಲಿರುವ ರಾಯಲ್‌ ಆರ್ಚ್‌ ಫ್ಯಾಮಿಲಿ ಸಲೂನ್‌ ಮತ್ತು ಸ್ಪಾ ಮೇಲೆ ಪೊಲೀಸ್‌ ದಾಳಿ ನಡೆದಿತ್ತು. ಬೇರೆ ಕಡೆಯಿಂದ ಯುವತಿಯರನ್ನು ಕರೆಯಿಸಿ ಅವರಿಗೆ ಹಣದ ಆಮಿಷವೊಡ್ಡಿ ವೇಶ್ಯಾವಾಟಿಕೆ ನಡೆಸುತ್ತಿರುವ ಕುರಿತು ಪೊಲೀಸರಿಗೆ ಖಚಿತ ಮಾಹಿತಿ ಲಭ್ಯವಾಗಿತ್ತು.

ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದ ಮೇಲೆ ಸ್ಪಾ ಮಾಲೀಕರಾದ ಗೋಪಾಲ ಮತ್ತು ವಿದ್ಯಾಶ್ರೀಯನ್ನು ಬಂಧಿಸಲಾಗಿದ್ದು, ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...