HomeInternationalನಂಬಲಸಾಧ್ಯವಾದರೂ ಇದು ಸತ್ಯ: ಕೇವಲ 270 ರೂಪಾಯಿಗೆ ಮೂರು ಮನೆ ಖರೀದಿಸಿದ ಮಹಿಳೆ

ನಂಬಲಸಾಧ್ಯವಾದರೂ ಇದು ಸತ್ಯ: ಕೇವಲ 270 ರೂಪಾಯಿಗೆ ಮೂರು ಮನೆ ಖರೀದಿಸಿದ ಮಹಿಳೆ

ಕ್ಯಾಲಿಫೋರ್ನಿಯಾದ 49 ವರ್ಷ ವಯಸ್ಸಿನ ರೂಬಿ ಡೇನಿಯಲ್ಸ್ ಹೆಸರಿನ ಮಹಿಳೆಯೊಬ್ಬರು ಇಟಲಿಯ ಮುಸ್ಸೋಮೆಲಿ ಎಂಬಲ್ಲಿ ಮೂರು ಮನೆಗಳನ್ನು ಖರೀದಿ ಮಾಡಿದ ವಿಚಾರವೊಂದು ಸುದ್ದಿ ಮಾಡುತ್ತಿದೆ.

ಆಸ್ತಿ ಖರೀದಿ ವಿಚಾರದಲ್ಲೇನು ವಿಶೇಷ ಎಂದಿರಾ ? ಅಲ್ಲೇ ಇರೋದು ನೋಡಿ ಟ್ವಿಸ್ಟ್….! ಇಟಲಿಯಲ್ಲಿ ಭಯಂಕರ ಅಗ್ಗದ ಬೆಲೆಗೆ ಮನೆಗಳು ಸಿಗುತ್ತವೆ ಎಂದು ಅರಿತ ರೂಬಿ ಕೂಡಲೇ ಮೂರು ಯೂರೋಗಳನ್ನು (270 ರೂ.) ತೆತ್ತು ಈ ಮೂರು ಮನೆಗಳನ್ನು ಖರೀದಿ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಶಿಥಿಲಾವಸ್ಥೆಯಲ್ಲಿದ್ದ ಈ ಮನೆಗಳನ್ನು ತಲಾ ಒಂದು ಯೂರೋ (89 ರೂ.) ಕೊಟ್ಟು ಖರೀದಿ ಮಾಡಿರುವ ರೂಬಿ ಇದೀಗ ಅವುಗಳಿಗೆ ಪರಿಸರ ಸ್ನೇಹಿ ಮಾರ್ಗದಲ್ಲಿ ರಿಪೇರಿ ಮಾಡಲು ಮುಂದಾಗಿದ್ದಾರೆ.

“ನಾವು ಹೊಸದಾಗಿ ನಿರ್ಮಾಣ ಮಾಡುವ ಬದಲಿಗೆ ಅದಾಗಲೇ ಇರುವ ಮನೆಗಳನ್ನೇ ಮರುವಿನ್ಯಾಸ ಮಾಡುವುದನ್ನು ಆರಂಭಿಸಬೇಕಿದೆ,” ಎಂದು ಹೇಳುತ್ತಾರೆ ರೂಬಿ.

2020 ರಿಂದ ಈ ಮನೆಗಳ ಮರುನಿರ್ಮಾಣ ಕಾರ್ಯದಲ್ಲಿರುವ ಬ್ರೆಜ಼ಿಲ್ ಮೂಲದ ರೂಬಿ, ಸ್ಯಾನ್ ಫ್ರಾನ್ಸಿಸ್ಕೋವನ್ನು ಕರ್ಮಭೂಮಿಯನ್ನಾಗಿಯೂ, ಮುಸ್ಸೋಮೆಲಿಯನ್ನು ಇಚ್ಛೆಯ ಊರನ್ನಾಗಿಯೂ ಮಾಡಿಕೊಂಡು ಎರಡೂ ಊರುಗಳ ನಡುವೆ ನಿರಂತರ ಓಡಾಟದಲ್ಲಿ ನಿರತರಾಗಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular