
ಈ ಆಘಾತದ ಸುದ್ದಿಯನ್ನ ನಿರ್ಮಾಪಕ ಜೆಡಿ ಮಜೇಥಿಯಾ ಹಂಚಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್ ಸ್ಟೋರಿ ಪೋಸ್ಟ್ ನಲ್ಲಿ ಈ ಬಗ್ಗೆ ನೋವು ತೋಡಿಕೊಂಡಿರೋ ಅವರು ಉತ್ತರ ಭಾರತದಲ್ಲಿ ಅಪಘಾತ ಸಂಭವಿಸಿದೆ ಎಂದು ಮಾಹಿತಿ ನೀಡಿದ್ದಾರೆ.
“ಜೀವನವು ತುಂಬಾ ಅನಿರೀಕ್ಷಿತವಾಗಿದೆ. ಸಾರಾಭಾಯಿ ವರ್ಸಸ್ ಸಾರಾಭಾಯಿಯಲ್ಲಿ ಜಾಸ್ಮಿನ್ ಎಂದು ಜನಪ್ರಿಯವಾಗಿರುವ ಅತ್ಯಂತ ಉತ್ತಮ ನಟಿ, ಆತ್ಮೀಯ ಸ್ನೇಹಿತೆ ವೈಭವಿ ಉಪಾಧ್ಯ ನಿಧನರಾಗಿದ್ದಾರೆ. ಅವರು ಉತ್ತರ ಭಾರತದಲ್ಲಿ ಅಪಘಾತಕ್ಕೀಡಾದರು. ಕುಟುಂಬವು ನಾಳೆ ಬೆಳಿಗ್ಗೆ 11 ಗಂಟೆಗೆ ಅವರ ಮೃತದೇಹವನ್ನು ಮುಂಬೈಗೆ ತರುತ್ತದೆ. RIP ವೈಭವಿ” ಎಂದು ಪೋಸ್ಟ್ ಮಾಡಿದ್ದಾರೆ.
ವೈಭವಿ 2020 ರಲ್ಲಿ ‘ಛಪಾಕ್’ ಚಿತ್ರ ಮತ್ತು ‘ತಿಮಿರ್’ (2023) ನಲ್ಲಿ ದೀಪಿಕಾ ಪಡುಕೋಣೆ ಜೊತೆಗೆ ಕೆಲಸ ಮಾಡಿದ್ದರು.
ಮೇ 22 ರಂದು ಮುಂಬೈನ ಅಂಧೇರಿಯಲ್ಲಿರುವ ತನ್ನ ಅಪಾರ್ಟ್ಮೆಂಟ್ನಲ್ಲಿ ನಟ ಆದಿತ್ಯ ಸಿಂಗ್ ರಜಪೂತ್ ಶವವಾಗಿ ಪತ್ತೆಯಾದ ಕೆಲವೇ ದಿನಗಳ ನಂತರ ವೈಭವಿ ಸಾವಿನ ಸುದ್ದಿ ಬಂದಿದೆ.

