HomeEntertainmentನಗು ತರಿಸುವಂತಿದೆ ನಟಿಯನ್ನು ಅನುಕರಿಸಿರುವ ವಿಡಿಯೋ....!

ನಗು ತರಿಸುವಂತಿದೆ ನಟಿಯನ್ನು ಅನುಕರಿಸಿರುವ ವಿಡಿಯೋ….!

ನಟಿ ಉರ್ಫಿ ಜಾವೇದ್ ತನ್ನ ವಿಚಿತ್ರ ಉಡುಗೆ ತೊಡುವುದರಿಂದ ಆಗಾಗ್ಗೆ ಸುದ್ದಿಯಾಗುತ್ತಾರೆ. ವಿಚಿತ್ರ ಉಡುಪು ಧರಿಸುವುದರಿಂದಲೇ ಸಾಮಾಜಿಕ ಮಾಧ್ಯಮದಲ್ಲಿ ಉರ್ಫಿ ಜನಪ್ರಿಯತೆಯನ್ನು ಪಡೆದಿದ್ದಾಳೆ.

ಅಷ್ಟೇ ಅಲ್ಲ, ಈಕೆ ಸಾಕಷ್ಟು ಟ್ರೋಲ್ ಗೂ ಒಳಗಾಗಿದ್ದಾಳೆ. ಇದೀಗ ಅಮೆರಿಕಾದ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಉರ್ಫಿ ಧರಿಸುವ ಬಟ್ಟೆಯನ್ನು ಮರುಸೃಷ್ಟಿಸಿದ್ದಾರೆ. ಸದ್ಯ ಈ ವಿಡಿಯೋ ಭಾರಿ ವೈರಲ್ ಆಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದೀಗ ವೈರಲ್ ಆಗಿರುವ ವಿಡಿಯೋವನ್ನು ಚಾಂಗ್ ಹೀ ಕಿಮ್ ಅವರು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಮೊದಲಿಗೆ ಜೀನ್ಸ್ ಪ್ಯಾಂಟ್ ಅನ್ನು ಶರ್ಟ್ ರೀತಿ ಹಾಕಿಕೊಂಡ ಉರ್ಫಿಯನ್ನು ತೋರಿಸಲಾಗಿದೆ. ಯುಎಸ್ ಇನ್ಸ್ಟಾಗ್ರಾಂ ಇನ್ಫ್ಲುಯೆನ್ಸರ್ ಕೂಡ ಟಾಪ್ ಆಗಿ ಜೀನ್ಸ್ ಪ್ಯಾಂಟ್ ಅನ್ನು ಹಾಕಿಕೊಂಡು ನಡೆದಿದ್ದಾರೆ.

ಹೌದು, ಚಾಂಗ್ ಎಂಬುವವರು ಮಧ್ಯದಿಂದ ಒಂದು ಜೋಡಿ ಜೀನ್ಸ್ ಅನ್ನು ಕತ್ತರಿಸಿ ಅದನ್ನು ಟಾಪ್ ಆಗಿ ಧರಿಸಿ ಕ್ಯಾಟ್ ವಾಕ್ ಮಾಡಿದ್ರು. ಜೊತೆಗೆ ಚಾಂಗ್ ಜೀನ್ಸ್ ಪ್ಯಾಂಟ್ ಮತ್ತು ಬಿಳಿ ಟೀ ಶರ್ಟ್ ಧರಿಸಿದ್ದರು. ಇದನ್ನು ನನ್ನ ಬೆಕ್ಕು ಕೂಡ ಅನುಮೋದಿಸಲಿಲ್ಲ ಎಂದು ಪೋಸ್ಟ್‌ಗೆ ಶೀರ್ಷಿಕೆ ನೀಡಲಾಗಿದೆ.

ಈ ವಿಡಿಯೋ ಇದುವರೆಗೆ 2 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಸಾಮಾಜಿಕ ಮಾಧ್ಯಮ ಬಳಕೆದಾರರು ವಿಡಿಯೋ ನೋಡಿ ನಕ್ಕಿದ್ದು, ಟನ್ ಗಳಷ್ಟು ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ನಾನು ದೇವರ ಮೇಲೆ ಪ್ರಮಾಣ ಮಾಡುತ್ತೇನೆ, ಭಾರತೀಯರು ನಿಜವಾಗಿ ಈ ರೀತಿಯ ಉಡುಗೆಯನ್ನು ಧರಿಸುವುದಿಲ್ಲ ಎಂದು ಬಳಕೆದಾರರು ಬರೆದಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular