ಫುಟ್‌ಬಾಲ್ ಆಟಕ್ಕೆ ಅಡ್ಡಿಪಡಿಸಿದ ನಾಯಿ; ಶ್ವಾನದ ಚೇಷ್ಟೆಗೆ ಹುರಿದುಂಬಿಸಿದ ಪ್ರೇಕ್ಷಕರು

ಕ್ರೀಡಾಂಗಣದಲ್ಲಿ ಆಟಗಾರರು ಫುಟ್ಬಾಲ್ ಆಡುವಾಗ ಶ್ವಾನಗಳು ಮತ್ತು ಬೆಕ್ಕುಗಳು ಅಡ್ಡಿಪಡಿಸಿರುವ ಹಲವಾರು ನಿದರ್ಶನಗಳಿವೆ. ಇದೀಗ ಚಿಲಿಯ ಫುಟ್‌ಬಾಲ್ ಮೈದಾನದಲ್ಲಿ ನಾಯಿಯೊಂದು ಸಂತೋಷದಿಂದ ಓಡಿ ಹೋಗಿ ಫುಟ್ಬಾಲ್ ಆಡಿರುವ ವಿಡಿಯೋ ವೈರಲ್ ಆಗಿದೆ. ನೆರೆದಿದ್ದ ಪ್ರೇಕ್ಷಕರಿಗೆ ಭರಪೂರ ಮನರಂಜನೆ ಸಿಕ್ಕಿದೆ.

ಹೌದು, ಚಿಲಿಯ ಕುರಿಕೊದಲ್ಲಿ ಈ ಘಟನೆ ನಡೆದಿದೆ. ಆತಿಥೇಯ ತಂಡವಾದ ಕ್ಯುರಿಕೊ ಯುನಿಡೊ ಮತ್ತು ಪ್ರವಾಸಿ ಚಿಲಿಯ ತಂಡವಾದ ಪ್ಯಾಲೆಸ್ಟಿನೊ ನಡುವೆ ಪಂದ್ಯ ನಡೆಯುತ್ತಿತ್ತು. ಈ ವೇಳೆ ಫುಟ್ಬಾಲ್ ಮೈದಾನದಲ್ಲಿ ನಾಯಿಯೊಂದು ಕಾಣಿಸಿಕೊಂಡಿದೆ. ಕೆಲವೇ ಸೆಕೆಂಡುಗಳಲ್ಲಿ, ನಾಯಿಯು ಚೆಂಡನ್ನು ಬಾಯಲ್ಲಿ ಕಚ್ಚಿ ಹಿಡಿದುಕೊಂಡಿತು ಮತ್ತು ಅದನ್ನು ಬಿಡಲು ನಿರಾಕರಿಸಿತು.

ಪ್ಯಾಲೆಸ್ಟಿನೋ ಆಟಗಾರರಲ್ಲಿ ಒಬ್ಬರಾದ ಮ್ಯಾಕ್ಸಿಮಿಲಿಯಾನೊ ಸಲಾಸ್ ಅವರು ನಾಯಿಯನ್ನು ಎತ್ತಿಕೊಂಡು ಅದನ್ನು ಕ್ರೀಡಾಂಗಣದ ಭದ್ರತಾ ಅಧಿಕಾರಿಯೊಬ್ಬರಿಗೆ ಹಸ್ತಾಂತರಿಸಿದರು. ಸದ್ಯ, ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರ ಮನರಂಜಿಸಿದೆ. ನೆಟ್ಟಿಗರು ನಾಯಿಯ ಚೇಷ್ಟೆಯನ್ನು ಪುಟ್ಟ ಮಕ್ಕಳಿಗೆ ಹೋಲಿಸಿ ನಕ್ಕಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read