HomeRecipiesಆಹಾ.....! ಎಂದು ಸವಿಯುತ್ತೀರಾ ಹೀಗೆ ತಯಾರಿಸಿದ ಉಪ್ಪಿಟ್ಟು

ಆಹಾ…..! ಎಂದು ಸವಿಯುತ್ತೀರಾ ಹೀಗೆ ತಯಾರಿಸಿದ ಉಪ್ಪಿಟ್ಟು

ಉಪ್ಪಿಟ್ಟು ಅಂದಾಕ್ಷಣ ಮೂಗು ಮುರಿಯುವವರು ಕೆಲವರಾದರೆ, ಅಷ್ಟೇ ಇಷ್ಟ ಪಟ್ಟು ತಿನ್ನುವವರೂ ಇದ್ದಾರೆ. ಆಂಧ್ರ ಶೈಲಿಯ ಉಪ್ಪಿಟ್ಟು ಮಾಡಿ ನೋಡಿ, ಇದು ಟೇಸ್ಟಿ ಅಷ್ಟೇ ಅಲ್ಲ ಹೆಲ್ದಿ ಕೂಡಾ ಹೌದು.

ಬೇಕಾಗುವ ಸಾಮಗ್ರಿಗಳು

ಹೆಸರು ಬೇಳೆ – ಒಂದು ಕಪ್
ಅಕ್ಕಿ ತರಿ ಅಥವಾ ಸಣ್ಣ ಗೋಧಿ ನುಚ್ಚು – ಎರಡು ಕಪ್
ಹಸಿ ಮೆಣಸಿನ ಕಾಯಿ – 3-4
ಒಣ ಮೆಣಸಿನ ಕಾಯಿ – 2-3
ಉದ್ದಿನ ಬೇಳೆ – 1 ಚಮಚ
ಕಡಲೇ ಬೇಳೆ – 1 ಚಮಚ
ಸಣ್ಣಗೆ ಹೆಚ್ಚಿದ ಶುಂಠಿ ಚೂರು – ಸ್ವಲ್ಪ
ಜೀರಿಗೆ – ಅರ್ಧ ಚಮಚ
ಕೊತ್ತಂಬರಿ ಹಾಗೂ ಕರಿಬೇವು – ಸ್ವಲ್ಪ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತಯಾರಿಸುವ ವಿಧಾನ

ಹೆಸರು ಬೇಳೆಯನ್ನು ಸ್ವಲ್ಪ ಬಿಸಿ ಮಾಡಿಕೊಳ್ಳಿ. ಅಕ್ಕಿ ಅಥವಾ ಗೋಧಿ ತರಿಯನ್ನು ಸ್ವಲ್ಪ ಕೆಂಪಗೆ ಹುರಿದುಕೊಳ್ಳಿ. ಎಣ್ಣೆ, ಸಾಸಿವೆ, ಇಂಗು ಕರಿಬೇವು ಹಾಕಿ ಒಗ್ಗರಣೆ ಮಾಡಿ ಇದಕ್ಕೆ ಹಸಿ ಹಾಗೂ ಒಣ ಮೆಣಸಿನಕಾಯಿ, ಶುಂಠಿ ಚೂರು, ಕಡಲೇ ಬೇಳೆ, ಉದ್ದಿನ ಬೇಳೆ ಹಾಕಿ ಕೆಂಪಗೆ ಬಾಡಿಸಿಕೊಳ್ಳಿ. 1:2 ಅನುಪಾತದಂತೆ ನೀರು ಹಾಕಿ ಹೆಸರು ಬೇಳೆ ಬೇಯಲು ಬಿಡಿ. (ಹೆಸರು ಬೇಳೆ ನುಣ್ಣಗೆ ಬೇಯಿಸಬಾರದು) 5 ನಿಮಿಷದ ನಂತರ ಅಕ್ಕಿ ಅಥವಾ ಗೋಧಿ ತರಿ ಹಾಕಿ ಅಗತ್ಯಕ್ಕೆ ತಕ್ಕಷ್ಟು ಉಪ್ಪು ಬೆರೆಸಿ ಮಂದ ಉರಿಯಲ್ಲಿ ಬೇಯಲು ಬಿಡಿ. ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಬಡಿಸಿ.

For Latest News Updates, Join Our Whatsapp Community🚩
RELATED ARTICLES

Most Popular