alex Certify ರೈತರಿಗೆ ಮುಖ್ಯ ಮಾಹಿತಿ: ಜೀವನಾಡಿಯಾದ ಮುಂಗಾರು ಮಳೆ ಅಲ್ಪ ವಿಳಂಬ ಸಾಧ್ಯತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈತರಿಗೆ ಮುಖ್ಯ ಮಾಹಿತಿ: ಜೀವನಾಡಿಯಾದ ಮುಂಗಾರು ಮಳೆ ಅಲ್ಪ ವಿಳಂಬ ಸಾಧ್ಯತೆ

ನವದೆಹಲಿ: ಈ ಬಾರಿ ಮುಂಗಾರು ಮಳೆ ಅಲ್ಪ ವಿಳಂಬವಾಗುವ ಸಾಧ್ಯತೆ ಇದೆ. ಪ್ರತಿ ವರ್ಷ ಜೂನ್ 1 ರ ವೇಳೆಗೆ ಆಗಮಿಸುವ ಮುಂಗಾರು ಈ ಬಾರಿ ಜೂನ್ 4ರಂದು ಕೇರಳ ಪ್ರವೇಶಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಮಾನ ಇಲಾಖೆ ಹೇಳಿದೆ.

ಸಾಮಾನ್ಯವಾಗಿ ಮುಂಗಾರು ಜೂನ್ 1ಕ್ಕೆ ಕೇರಳ ಪ್ರವೇಶಿಸುತ್ತದೆ. ಇದರಲ್ಲಿ 7 ದಿನ ಮುಂದೂಡಿಕೆ ಅಥವಾ ಹಿಂದೂಡಿಕೆ ಸಾಧ್ಯತೆ ಇರುತ್ತದೆ. ಕಳೆದ ವರ್ಷ ಮೇ 29ಕ್ಕೆ ಮುಂಗಾರು ಪ್ರವೇಶಿಸಿತ್ತು. 2021 ರಲ್ಲಿ ಜೂನ್ 3, 2020ರಲ್ಲಿ ಜೂನ್ 1, 20019ರಲ್ಲಿ ಜೂನ್ 8 ಹಾಗೂ 2018 ರಲ್ಲಿ ಮೇ 29ಕ್ಕೆ ಕೇರಳಕ್ಕೆ ಮುಂಗಾರು ಆಗಮನವಾಗಿತ್ತು.

ಈ ಬಾರಿ ಜೂನ್ 4ರ ವೇಳೆಗೆ ಕೇರಳಕ್ಕೆ ಮುಂಗಾರು ಆಗಮನವಾಗಲಿದ್ದು, ನಂತರ ಕರ್ನಾಟಕ ಪ್ರವೇಶಿಸಲಿದೆ. ಈ ವರ್ಷ ವಾಡಿಕೆಯಂತೆ ಮಳೆಯಾಗಲಿದೆ ಎಂದು ಹೇಳಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...