HomeIndiaಬಿಸಿಲಿನಲ್ಲಿಯೇ ಆಸ್ಪತ್ರೆಗೆ ನಡೆದು ಹೋದ ತುಂಬು ಗರ್ಭಿಣಿ ಸಾವು

ಬಿಸಿಲಿನಲ್ಲಿಯೇ ಆಸ್ಪತ್ರೆಗೆ ನಡೆದು ಹೋದ ತುಂಬು ಗರ್ಭಿಣಿ ಸಾವು

ಪಾಲ್​ಘರ್​: ಈಗ ಎಲ್ಲೆಲ್ಲೂ ಬಿಸಿಲಿನ ಝಳ. ಈ ಝಳಕ್ಕೆ ಮಹಾರಾಷ್ಟ್ರದ ಪಾಲ್​ಘರ್ ಜಿಲ್ಲೆಯ ಗರ್ಭಿಣಿಯೊಬ್ಬರು ಬಲಿಯಾಗಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗಿ ಬರುಲು ಬಿಸಿಲಿನಲ್ಲೇ ತನ್ನ ಗ್ರಾಮದಿಂದ ಏಳು ಕಿಲೋಮೀಟರ್ ನಡೆದ 21 ವರ್ಷದ ಬುಡಕಟ್ಟು ಜನಾಂಗದ ಗರ್ಭಿಣಿ ಬಿಸಿಲಿನ ತಾಪದಿಂದ ಸಾವನ್ನಪ್ಪಿದ್ದಾರೆ!

ದಹಾನು ತಾಲೂಕಿನ ಓಸರ್ ವೀರ ಗ್ರಾಮದ ಸೋನಾಲಿ ವಾಘಾಟ್ ಅವರು ಬಿಸಿಲಿನ ಬೇಗೆಯಲ್ಲೇ 3.5 ಕಿ.ಮೀ ದೂರ ನಡೆದಿದ್ದಾರೆ. ನಂತರ ಅವರು ಅಲ್ಲಿಂದ ಆಟೋ ರಿಕ್ಷಾದಲ್ಲಿ ಆಸ್ಪತ್ರೆಗೆ ತೆರಳಿದ್ದಾರೆ. ಒಂಬತ್ತನೇ ತಿಂಗಳಿನಲ್ಲಿದ್ದ ಮಹಿಳೆಗೆ ಕೇಂದ್ರದಲ್ಲಿ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಲಾಗಿದೆ. ಆದರೆ ಆ ಮಹಿಳೆ ಮತ್ತೆ ರಣ ಬಿಸಿಲಿನಲ್ಲಿಯೇ ಹೆದ್ದಾರಿಯಿಂದ ಮನೆಗೆ 3.5 ಕಿಮೀ ದೂರ ನಡೆದುಕೊಂಡು ಹೋಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಂಜೆ ನಂತರ, ಅವರ ಆರೋಗ್ಯದಲ್ಲಿ ತೊಂದರೆ ಕಾಣಿಸಿಕೊಂಡಿದ್ದು, ಧುಂಡಲವಾಡಿ ಪಿಎಚ್‌ಸಿಗೆ ಹೋಗಿದ್ದಾರೆ. ಅಲ್ಲಿಂದ ಅವರನ್ನು ಕಳಸ ಉಪವಿಭಾಗೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಕಿಚಿತ್ಸೆ ಫಲಕಾರಿಯಾಗದೆ ಮಹಿಳೆ ಮೃತಪಟ್ಟಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ಮಹಿಳೆಗೆ ಯಾವುದೇ ಹೆರಿಗೆ ನೋವು ಕಾಣಿಸಿಕೊಂಡಿಲ್ಲ. ಆದರೂ ವೈದ್ಯರು ತಕ್ಷಣ ಆಕೆ ಬಗ್ಗೆ ಗಮನ ಹರಿಸಿದ್ದರು. ಆದರೆ ಆಕೆ ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಕಾರಣ ಅವರಿಗೆ ಹೆಚ್ಚಿನ ಚಿಕಿತ್ಸೆ ನೀಡಲು ಸಾಧ್ಯವಾಗಲಿಲ್ಲ ಮತ್ತು ಅವರನ್ನು ವಿಶೇಷ ಆಸ್ಪತ್ರೆಗೆ ಕಳುಹಿಸಲಾಯಿತು ಎಂದು ಅಧಿಕಾರಿ ಹೇಳಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular