ಆಟೋ ಜಖಂಗೊಳಿಸಿದ ದುಷ್ಕರ್ಮಿಗಳಿಂದ ಚಾಲಕನ ಮೇಲೆ ಹಲ್ಲೆ

ಶಿವಮೊಗ್ಗ: ಸೋಮಿನಕೊಪ್ಪದಲ್ಲಿ ಇಂದು ಬೆಳಿಗ್ಗೆ ದುಷ್ಟರ್ಮಿಗಳು ಹರೀಶ್‌ರಾವ್ ಎಂಬ ಆಟೋ ಚಾಲಕನನ್ನು ಥಳಿಸಿ ಆಟೋ ಜಖಂಳಿಸಿದ್ದು, ತೀವ್ರ ಗಾಯಗೊಂಡ ಆತನನ್ನು ಆತನ ಸ್ನೇಹಿತ ಜಿಲ್ಲಾ ರಕ್ಷಣಾಧಿಕಾರಿಗಳ ಕಚೇರಿಗೆ ಕರದುಕೊಂಡು ಬಂದು ದೂರು ನೀಡಿದ್ದಾರೆ.

ಆಟೋ ಚಾಲಕ ಹರೀಶ್ ರಾವ್‌ ನನ್ನು ಮತದಾನಕ್ಕೆ ಸಂಬಂಧಿಸಿದಂತೆ ಸ್ಥಳೀಯರಾದ ಡಬ್ಬ ಅಲಿಯಾಸ್ ನಜರು, ಇಡ್ಲಿ ಅಲಿಯಾಸ್ ಅಬ್ರಾರ್ ಹಾಗೂ ಇನ್ನೋರ್ವ ಹಲ್ಲೆ ಮಾಡಿ, ಪ್ರಾಣ ಬೆದರಿಕೆ ಒಡ್ಡಿದ್ದಾರೆ ಎಂದು ಹರೀಶ್ ರಾವ್ ಆರೋಪಿಸಿದ್ದಾರೆ.

ದೂರು ನೀಡಲು ಬಂದಾಗ ಸ್ಥಳದಲ್ಲಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪನವರು ಇದ್ದುದರಿಂದ ಆತ ಈಶ್ವರಪ್ಪನವರ ಕಾಲಿಗ ಬಿದ್ದು ರಕ್ಷಣೆ ನೀಡುವಂತೆ ಕೋರಿದ್ದಾರೆ.

ತಕ್ಷಣ ಈಶ್ವರಪ್ಪನವರು ಜಿಲ್ಲಾ ರಕ್ಷಣಾಧಿಕಾರಿಗಳಿಗೆ ದೂರವಾಣಿ ಮೂಲಕ ಮಾತನಾಡಿ, ಆಟೋ ಚಾಲಕನಿಗೆ ರಕ್ಷಣೆ ನೀಡಿ ಹಲ್ಲೆ ಮಾಡಿದವರ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read