alex Certify ನಿಧಿಗಿಂತ ಕಡಿಮೆಯೇನಿಲ್ಲ ಈ ಮರಗಳ ಅಂಟು, ಆರೋಗ್ಯಕ್ಕಿದೆ ಇಷ್ಟೆಲ್ಲಾ ಲಾಭ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಧಿಗಿಂತ ಕಡಿಮೆಯೇನಿಲ್ಲ ಈ ಮರಗಳ ಅಂಟು, ಆರೋಗ್ಯಕ್ಕಿದೆ ಇಷ್ಟೆಲ್ಲಾ ಲಾಭ….!

ಅಂಟಿನುಂಡೆ ಬಗ್ಗೆ ಬಹುತೇಕರಿಗೆ ತಿಳಿದಿರಬಹುದು. ಸಾಮಾನ್ಯವಾಗಿ ಬಾಣಂತಿಯರಿಗೆ ಅಂಟಿನುಂಡೆ ನೀಡಲಾಗುತ್ತದೆ. ತಿನ್ನಲು ಇದು ಬಹಳ ರುಚಿಕರವಾಗಿರುತ್ತದೆ. ಈ ಅಂಟನ್ನು ಅನೇಕ ಆಯುರ್ವೇದ ಔಷಧಿಗಳಲ್ಲಿ ಬಳಸಲಾಗುತ್ತದೆ. ಇದು ರೋಗಗಳನ್ನು ಗುಣಪಡಿಸಲು ಉಪಯುಕ್ತವಾಗಿದೆ. ಅಂಟು ನಮಗೆ ಏಕೆ ಪ್ರಯೋಜನಕಾರಿ? ಅದನ್ನು ಯಾವ ರೀತಿಯಲ್ಲಿ ಬಳಸಬಹುದು ಎಂಬುದನ್ನು ನೋಡೋಣ.

ಅಕೇಶಿಯ ಅಂಟು : ಅಕೇಶಿಯಾ ಮರದ ಅಂಟನ್ನು ಅನೇಕ ಜನರು ಬಳಸುತ್ತಾರೆ, ಅದರ ಪೌಷ್ಟಿಕಾಂಶದ ಮೌಲ್ಯವು ತುಂಬಾ ಹೆಚ್ಚಾಗಿದೆ. ಆದ್ದರಿಂದ ಅನೇಕ ಆರೋಗ್ಯ ತಜ್ಞರು ಇದನ್ನು ನಿಯಮಿತವಾಗಿ ತಿನ್ನಲು ಶಿಫಾರಸು ಮಾಡುತ್ತಾರೆ.

ಪಲಾಶ ಅಂಟು :  ನಿಯಮಿತವಾಗಿ ಪಲಾಶ ಅಂಟನ್ನು ಸೇವಿಸಿದರೆ ಅದು ಮೂಳೆಗಳು ಮತ್ತು ದೇಹಕ್ಕೆ ಅದ್ಭುತ ಶಕ್ತಿಯನ್ನು ನೀಡುತ್ತದೆ. ಇದು ಪುರುಷರಿಗೆ ಪ್ರಯೋಜನಕಾರಿಯಾಗಿದೆ, ಇದು ವೀರ್ಯದ ಸಂಖ್ಯೆಯನ್ನು ಹೆಚ್ಚಿಸುತ್ತದೆ.

ಬೇವಿನ ಅಂಟು: ಬೇವಿನ ಔಷಧೀಯ ಗುಣಗಳ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ. ಅದರ ಅಂಟನ್ನು ಸೇವನೆ ಮಾಡುವುದರಿಂದ ರಕ್ತದಲ್ಲಿ ಅದ್ಭುತ ಶಕ್ತಿ ಬರುತ್ತದೆ. ಬೇವಿನ ಅಂಟನ್ನು ಅನೇಕ ಔಷಧಿಗಳಲ್ಲಿ ಬಳಸಲಾಗುತ್ತದೆ.

ಗೋಂದು ಅಥವಾ ಅಂಟು ಸೇವನೆಯ ಪ್ರಯೋಜನಗಳು: ಅಂಟಿನಿಂದ ಮಾಡಿದ ತಿನಿಸುಗಳನ್ನು ತಿನ್ನುವುದರಿಂದ ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಕಡಿಮೆಯಾಗುತ್ತದೆ.ಅಂಟು, ಬೆಲ್ಲ ಮತ್ತು ಗೋಧಿ ಹಿಟ್ಟು ಬೆರೆಸಿ ಲಾಡು ಮಾಡಿಕೊಂಡು ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಚಳಿಗಾಲದಲ್ಲಿ ದೇಹದ ಉಷ್ಣತೆಯನ್ನು ಹೆಚ್ಚಿಸಲು ಅಂಟನ್ನು ಬಳಸಲಾಗುತ್ತದೆ. ಮಗುವಿನ ಜನನದ ನಂತರ ತಾಯಿ ಅಂಟನ್ನು ಸೇವಿಸಿದರೆ ಹೆಚ್ಚು ಎದೆಹಾಲು ಉತ್ಪತ್ತಿಯಾಗುತ್ತದೆ. ಗರ್ಭಿಣಿಯರಿಗೆ ಬೆನ್ನುಮೂಳೆಯನ್ನು ಬಲಪಡಿಸಲು ಅಂಟು ಪರಿಣಾಮಕಾರಿ.

ಅಂಟು ಸೇವನೆ ಹೇಗಿರಬೇಕು?

ಉತ್ತರ ಭಾರತದಲ್ಲಿ ಪ್ರಸಿದ್ಧವಾಗಿರುವ ಪಂಜಿರಿ ಎಂಬ ರೆಸಿಪಿ ಸೇವನೆ ಬಹಳ ಸೂಕ್ತ. ಮಖಾನ, ಡ್ರೈಫ್ರೂಟ್ಸ್‌ ಮತ್ತು ಹುರಿದ ಗೋಧಿ ಹಿಟ್ಟು, ಅಂಟನ್ನು ಹಾಕಿ ಇದನ್ನು ತಯಾರಿಸಲಾಗುತ್ತದೆ. ಅಂಟನ್ನು ತೆಂಗಿನ ತುರಿ, ಗಸಗಸೆ ಮತ್ತು ಖರ್ಜೂರದೊಂದಿಗೆ ಬೆರೆಸಿ ಕೂಡ ತಿನ್ನಬಹುದು. ಅಂಟು ಮತ್ತು ಬೆಲ್ಲವನ್ನು ಬೆರೆಸಿ ಚಿಕ್ಕಿಯನ್ನು ಕೂಡ ತಯಾರಿಸಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...