HomeKarnatakaBIG NEWS: ಸಿದ್ದರಾಮಯ್ಯ ಸಿಎಂ ಆಗಬೇಕು ಎಂಬುವವರಲ್ಲಿ ನಾನೂ ಒಬ್ಬ; ಶಾಸಕ ಬಸವರಾಜ್ ರಾಯರೆಡ್ಡಿ

BIG NEWS: ಸಿದ್ದರಾಮಯ್ಯ ಸಿಎಂ ಆಗಬೇಕು ಎಂಬುವವರಲ್ಲಿ ನಾನೂ ಒಬ್ಬ; ಶಾಸಕ ಬಸವರಾಜ್ ರಾಯರೆಡ್ಡಿ

ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನ ಬೆನ್ನಲ್ಲೇ ಸಿಎಂ ಹುದ್ದೆಗೆ ಪೈಪೋಟಿ ಆರಂಭವಾಗಿದೆ. ಈ ವಿಚಾರವಾಗಿ ಮಾತನಾಡಿದ ಶಾಸಕ ಬಸವರಾಜ್ ರಾಯರೆಡ್ಡಿ, ಸಿದ್ದರಾಮಯ್ಯ ಸಿಎಂ ಆಗಬೇಕು ಎನ್ನುವವರಲ್ಲಿ ನಾನೂ ಒಬ್ಬ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಸವರಾಜ್ ರಾಯರೆಡ್ಡಿ, ಸಿದ್ದರಾಮಯ್ಯಗೆ ಇಮೇಜ್ ಇದೆ, ಜನರ ಆಕರ್ಷಣೆ ಇದೆ. ಹಾಗಾಗಿ ಸಿದ್ದರಾಮಯ್ಯ ಸಿಎಂ ಆದರೆ ಒಳ್ಳೆಯದು. ಪಕ್ಷ ಯಾರನ್ನೇ ಸಿಎಂ ಮಾಡಿದರೂ ನಾವು ಒಪ್ಪಿಕೊಳ್ಳುತ್ತೇವೆ. ಡಿ.ಕೆ. ಶಿವಕುಮಾರ್ ಸಿಎಂ ಆದರೂ ಉತ್ತಮ ಆಡಳಿತ ನೀಡುತ್ತಾರೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಲಿಂಗಾಯಿತ ನಾಯಕರಲ್ಲಿ ನಾನು ಅತಿಹೆಚ್ಚು ಬಾರಿ ಗೆದ್ದವನು. ಲಿಂಗಾಯಿತ ನಾಯಕರು ಸಿಎಂ ಆಗಲಿ ಎಂದು ಕೇಳೋದು ತಪ್ಪಿಲ್ಲ ಎಂದರು. ಇನ್ನು 50:50 ಅಧಿಕಾರ ಹಂಚಿಕೆ ಬಗ್ಗೆ ನನಗೆ ಗೊತ್ತಿಲ್ಲ. ಒಬ್ಬರೇ 5 ವರ್ಷ ಸಿಎಂ ಆದರೆ ಉತ್ತಮ ಆಡಳಿತ ನೀಡಲು ಸಾಧ್ಯ. ಡಿಕೆಶಿಗೆ ಅವಕಾಶ ಕೊಟ್ಟರೂ ಅವರು ಚೆನ್ನಾಗಿಯೇ ಆಡಳಿತ ಮಾಡುತ್ತಾರೆ ಎಂದು ಹೇಳಿದರು.

For Latest News Updates, Join Our Whatsapp Community🚩
RELATED ARTICLES

Most Popular