ತುಮಕೂರು: ರಾಜ್ಯದಲ್ಲಿ ಜೆಡಿಎಸ್ ಪರಿಸ್ಥಿತಿ ಕೆಟ್ಟದಾಗಿದೆ. ಅಧಿಕಾರಕ್ಕೆ ಬರದಿದ್ದರೆ ಜೆಡಿಎಸ್ ಪಕ್ಷ ವಿಸರ್ಜನೆ ಮಾಡುತ್ತೇವೆ ಎಂದು ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದರು. ಅವರು ಪಕ್ಷ ವಿಸರ್ಜನೆ ಮಾಡಿ ತೋರಿಸಲಿ ಎಂದು ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಶಾಸಕ ಗುಬ್ಬಿ ಶ್ರೀನಿವಾಸ್ ಕಿಡಿಕಾರಿದ್ದಾರೆ.
ರಾಜ್ಯದಲ್ಲಿ ಜೆಡಿಎಸ್ ಪರಿಸ್ಥಿತಿ ಕೆಟ್ಟದಾಗಿದೆ. ಅಧಿಕಾರಕ್ಕೆ ಬರದೇ ಇದ್ದರೆ ಪಕ್ಷವನ್ನು ವಿಸರ್ಜನೆ ಮಾಡುವುದಾಗಿ ಕುಮಾರಸ್ವಾಮಿ ಹೇಳಿದ್ದು, ಅಂತೆಯೇ ಅವರು ಜೆಡಿಎಸ್ ಪಕ್ಷ ವಿಸರ್ಜನೆ ಮಾಡಿ ತೋರಿಸಲಿ. ಮಂಡ್ಯ ಜನರ ತೀರ್ಮಾನ ನೋಡಿದರೆ ಗೊತ್ತಾಗುತ್ತದೆ. ಬರೀ ಬ್ಲಾಕ್ ಮೇಲ್ ಮಾಡಿ ಈ ಸ್ಥಿತಿಗೆ ಬಂದರು ಎಂದು ಟೀಕಿಸಿದ್ದಾರೆ.
ರಾಮನಗರದಲ್ಲಿ ನಿಖಿಲ್ ಗೆ ಸೋಲಾಗಿದೆ. ರಾಮನಗರದಲ್ಲಿ ನಿಖಿಲ್ ಉಳ್ಳಿಸಿಕೊಳ್ಳಲು ಆಗಲಿಲ್ಲ. ಕುಮಾರಸ್ವಾಮಿ ನನ್ನನ್ನು ಸೋಲಿಸಲು ಹೊರಟಿದ್ದರು. ರಾಮನಗರದ ಜನತೆ ತಕ್ಕ ಪಾಠ ಕಲಿಸಿದ್ದಾರೆ. ಕುಟುಂಬ ರಾಜಕಾರಣಕ್ಕೆ ಕಲಿಸಿದ ಪಾಠ ಇದು ಎಂದು ಎಸ್.ಆರ್. ಶ್ರೀನಿವಾಸ್ ಹೇಳಿದ್ದಾರೆ.