ಹಸು ದೇವತೆಗೆ ಸಮಾನ ಅನ್ನೋ ಮಾತಿದೆ. ಆದ್ರೆ ಗೋವುಗಳನ್ನು ರಕ್ಷಿಸಬೇಕು ಅನ್ನೋ ಕೂಗು ಕೇಳಿಬರ್ತಾ ಇರೋದಕ್ಕೆ ಇದೊಂದೇ ಕಾರಣವಲ್ಲ. ಹಸುವಿನ ಹಾಲಿನ ಪ್ರಯೋಜನಗಳನ್ನು ಅರಿತರೆ ಪ್ರತಿಯೊಬ್ಬರಿಗೂ ಗೋ ರಕ್ಷಣೆಯ ಮಹತ್ವದ ಅರಿವಾಗುವುದರಲ್ಲಿ ಅನುಮಾನವೇ ಇಲ್ಲ.
ಹಸುವಿನ ಹಾಲು ರುಚಿಯಾಗಿರುತ್ತದೆ. ಜೀರ್ಣವಾಗೋದು ಸ್ವಲ್ಪ ಕಷ್ಟ. ಆದ್ರೆ ದೇಹ ಮತ್ತು ಮನಸ್ಸಿನ ಮೇಲೆ ಒಳ್ಳೆಯ ಪರಿಣಾಮ ಬೀರುತ್ತದೆ. ಹಸುವಿನ ಹಾಲನ್ನು ಚೆನ್ನಾಗಿ ಬಿಸಿ ಮಾಡಿಕೊಂಡು ಕುಡಿದರೆ ಸುಲಭವಾಗಿ ಜೀರ್ಣವಾಗುತ್ತದೆ. ಹಸುವಿನ ಹಾಲು ಇಮ್ಯೂನಿಟಿಯನ್ನು ಹೆಚ್ಚಿಸುತ್ತದೆ. ತಾಯಂದಿರಿಗೂ ಇದು ಉತ್ತಮ.
ಸುಸ್ತು, ತಲೆತಿರುಗುವಿಕೆ, ಬಾಯಾರಿಕೆ, ಹಸಿವು ಎಲ್ಲವನ್ನೂ ದೂರ ಮಾಡುವ ಶಕ್ತಿ ಹಸುವಿನ ಹಾಲಿಗೆ ಇದೆ. ಜ್ವರ, ಮೂತ್ರಕೋಶಕ್ಕೆ ಸಂಬಂಧಪಟ್ಟ ಖಾಯಿಲೆಗಳಿಗೂ ಇದು ರಾಮಬಾಣ. ಮುಟ್ಟಿನ ಸಂದರ್ಭದಲ್ಲಿ ಅತಿಯಾದ ರಕ್ತಸ್ರಾವವನ್ನು ಕಡಿಮೆ ಮಾಡುತ್ತದೆ.
ಒಂದು ಲೋಟ ಹಸುವಿನ ಹಾಲಿನಲ್ಲಿ ನಮ್ಮ ದೇಹಕ್ಕೆ ಪ್ರತಿನಿತ್ಯ ಬೇಕಾದ ಶೇ.10.8ರಷ್ಟು ಪೊಟ್ಯಾಶಿಯಂ ಇರುತ್ತದೆ. ಇದು ಸ್ನಾಯು ಮತ್ತು ನರಗಳಿಗೆ ಅತ್ಯಂತ ಅವಶ್ಯಕ. ಕಿಡ್ನಿಯಲ್ಲಿ ಕಲ್ಲು ಬೆಳೆದರೆ ಅದನ್ನು ಕೂಡ ಹಸುವಿನ ಹಾಲು ಕರಗಿಸುತ್ತದೆ. ಎಲುಬುಗಳಿಗೆ ಬೇಕಾದ ಕ್ಯಾಲ್ಷಿಯಂ ಪ್ರಮಾಣ ಹಸುವಿನ ಹಾಲಿನಲ್ಲಿ ಅಧಿಕವಾಗಿದೆ.
ಶರೀರಕ್ಕೆ ಅಗತ್ಯವಾದ ಪೋಷಕಾಂಶಗಳು, ಆಯೋಡಿನ್, ವಿಟಮಿನ್ ಬಿ2, ವಿಟಮಿನ್ ಬಿ12 ಅಂಶ ಹೇರಳವಾಗಿದೆ. ಆರ್ಥರೈಟಿಸ್ ಗೆ ಸಂಬಂಧಿಸಿದ ಖಾಯಿಲೆಗಳು ಹಸುವಿನ ಹಾಲು ಸೇವನೆಯಿಂದ ಕಡಿಮೆಯಾಗುತ್ತವೆ. ಕೇವಲ ಹಾಲು ಮಾತ್ರವಲ್ಲ, ಕೆಲವರು ಮೊಸರು, ಬೆಣ್ಣೆ, ತುಪ್ಪ ಮತ್ತು ಚೀಸ್ ಸೇವಿಸುತ್ತಾರೆ. ಆದ್ರೆ ಒಂದು ಮಾತ್ರ ನೆನಪಿನಲ್ಲಿಡಿ, ಹಸುವಿನ ಹಾಲನ್ನು ಚೆನ್ನಾಗಿ ಕುದಿಸಿ ಕುಡಿಯಿರಿ.