ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಬಂಧನ ಕಾನೂನು ಬಾಹಿರವೆಂದಿರುವ ಸುಪ್ರೀಂಕೋರ್ಟ್ ಅವರ ಬಿಡುಗಡೆಗೆ ಘೋಷಿಸಿದೆ. ಈ ಮೂಲಕ ಮಾಜಿ ಪ್ರಧಾನಮಂತ್ರಿ ಇಮ್ರಾನ್ ಖಾನ್ ಗೆ ಬಿಗ್ ರಿಲೀಫ್ ಸಿಕ್ಕಿದೆ.
ಮೇ 12 ಶುಕ್ರವಾರದಂದು ಹೈಕೋರ್ಟ್‌ಗೆ ಹಾಜರಾಗುವಂತೆ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಅಧ್ಯಕ್ಷ ಇಮ್ರಾನ್ ಖಾನ್ ಗೆ ಸುಪ್ರೀಂ ಕೋರ್ಟ್ ಹೇಳಿದೆ.
ಪಾಕಿಸ್ತಾನದ ಮುಖ್ಯ ನ್ಯಾಯಮೂರ್ತಿ (ಸಿಜೆಪಿ) ಉಮರ್ ಅಟಾ ಬಂಡಿಯಲ್ ಅವರು ಇಸ್ಲಾಮಾಬಾದ್ ಹೈಕೋರ್ಟ್ (ಐಎಚ್‌ಸಿ) ಆವರಣದಿಂದ ಪಿಟಿಐ ನಾಯಕನನ್ನು ಬಂಧಿಸಿರುವುದು ದೇಶದ ನ್ಯಾಯಾಂಗ ಸ್ಥಾಪನೆಗೆ ದೊಡ್ಡ ಅವಮಾನ ಎಂದು ಬಣ್ಣಿಸಿದ ನಂತರ ಇಮ್ರಾನ್ ಖಾನ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ನಿರ್ದೇಶಿಸಿದರು.
ಖಾನ್ ಬಂಧನವನ್ನು ಪ್ರಶ್ನಿಸಿ ಪಿಟಿಐ ಸಲ್ಲಿಸಿದ್ದ ಅರ್ಜಿಯನ್ನು ತ್ರಿಸದಸ್ಯ ಪೀಠ ವಿಚಾರಣೆ ನಡೆಸುತ್ತಿದ್ದಂತೆ ಪಾಕಿಸ್ತಾನದ ಮಾಜಿ ಕ್ರಿಕೆಟ್ ನಾಯಕನನ್ನು ಒಂದು ಗಂಟೆಯೊಳಗೆ ಹಾಜರುಪಡಿಸುವಂತೆ ಎನ್‌ಎಬಿಗೆ ಸುಪ್ರೀಂ ಕೋರ್ಟ್ ಆದೇಶಿಸಿದೆ.