HomeKarnatakaBIG NEWS: ಕರ್ನಾಟಕ ವಿಧಾನಸಭಾ ಚುನಾವಣೆ; ದಾಖಲೆ ಮತದಾನ

BIG NEWS: ಕರ್ನಾಟಕ ವಿಧಾನಸಭಾ ಚುನಾವಣೆ; ದಾಖಲೆ ಮತದಾನ

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ದಾಖಲೆ ಮತದಾನವಾಗಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.

ರಾಜ್ಯದ 224 ಕ್ಷೇತ್ರಗಳಲ್ಲಿ ಒಟ್ಟು ಶೇ.73.19ರಷ್ಟು ಮತದಾನವಾಗಿದೆ. 5,30,85,566 ಮತದಾರರ ಪೈಕಿ 3,88,51,807 ಮತದಾರರಿಂದ ಹಕ್ಕು ಚಲಾವಣೆಯಾಗಿದೆ.

ಒಟ್ಟು 1,96,58,398 ಪುರುಷ ಮತದಾರರು, 1,91,92,372 ಮಹಿಳಾ ಮತದಾರರಿಂದ ಮತದಾನ ಮಾಡಲಾಗಿದೆ. ಈ ಬಾರಿ ಶೇ.73.19ರಷ್ಟು ಮತದಾನವಾಗಿದ್ದು, 2018ರ ಚುನಾವಣೆಯಲ್ಲಿ ಶೇ.72.13ರಷ್ಟು ಮತದಾನವಾಗಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular