HomeKarnatakaBIG NEWS: ಸರ್ಕಾರ ರಚನೆಗೆ ಏನು ಕಸರತ್ತು ಮಾಡಬೇಕೋ ಮಾಡುತ್ತೇವೆ ಎಂದ ಸಚಿವ ಆರ್.ಅಶೋಕ್

BIG NEWS: ಸರ್ಕಾರ ರಚನೆಗೆ ಏನು ಕಸರತ್ತು ಮಾಡಬೇಕೋ ಮಾಡುತ್ತೇವೆ ಎಂದ ಸಚಿವ ಆರ್.ಅಶೋಕ್

ಬೆಂಗಳೂರು: ಕಾಂಗ್ರೆಸ್ ತಿಪ್ಪರಲಾಗಾ ಹಾಕಿದರೂ ಅಧಿಕಾರಕ್ಕೆ ಬರುವುದಿಲ್ಲ ಎಂದು ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರ್.ಅಶೋಕ್, ಹೆಚ್ಚು ಕಡಿಮೆಯಾದರೆ ನಮ್ಮ ಕೇಂದ್ರದ ನಾಯಕರು ಇದ್ದಾರೆ. ಸರ್ಕಾರ ರಚನೆಗೆ ಏನು ಕಸರತ್ತು ಮಾಡಬೇಕೋ ಮಾಡುತ್ತೇವೆ. ಕೇಂದ್ರದ ನಾಯಕರ ಸೂಚನೆಯಂತೆ ಪಾಲನೆ ಮಾಡುತ್ತೇವೆ ಎಂದರು.

ಇದೇ ವೇಳೆ ಆಪರೇಷನ್ ಕಮಲ ವಿಚಾರವಾಗಿ ಮಾತನಾಡಿದ ಆರ್.ಅಶೋಕ್, ನಾವು ಮಾಡಿದರೆ ಮಾತ್ರ ಆಪರೇಷನ್ ಕಮಲವೇ? ಕಾಂಗ್ರೆಸ್, ಜೆಡಿಎಸ್ ಮಾಡಿದರೆ ಏನು ಎಂದು ಪ್ರಶ್ನಿಸಿದ್ದಾರೆ. ಸಮೀಕ್ಷೆಯೇ ಸುಳ್ಳು ಅಂತಾ ನಾನು ಹೇಳಲ್ಲ, ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎಂದು ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular