HomeInternationalಕಣ್ಣಾಮುಚ್ಚಾಲೆ ಆಡುತ್ತಿದ್ದ ಬಾಲಕಿ ಮೇಲೆ ಗುಂಡು ಹಾರಿಸಿದ ವ್ಯಕ್ತಿ ಅರೆಸ್ಟ್

ಕಣ್ಣಾಮುಚ್ಚಾಲೆ ಆಡುತ್ತಿದ್ದ ಬಾಲಕಿ ಮೇಲೆ ಗುಂಡು ಹಾರಿಸಿದ ವ್ಯಕ್ತಿ ಅರೆಸ್ಟ್

ಕಣ್ಣಾಮುಚ್ಚಾಲೆ ಆಡುತ್ತಿದ್ದ ಗುಂಪಿನ ಮೇಲೆ ಗುಂಡು ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 58 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ. ಟೆಕ್ಸಾಸ್ ಸಮೀಪದ ಲೂಸಿಯಾನದಲ್ಲಿ ಈ ಘಟನೆ ನಡೆದಿದೆ.

ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಡೇವಿಡ್ ವಿ. ಡಾಯ್ಲ್ ಎಂಬ ವ್ಯಕ್ತಿ ಆ ಪ್ರದೇಶದಲ್ಲಿ ಕಣ್ಣಾಮುಚ್ಚಾಲೆ ಆಡುತ್ತಾ ನೆರೆಹೊರೆಯವರ ಜಾಗದಲ್ಲಿ ಅಡಗಿಕೊಂಡು ಆಡುತ್ತಿದ್ದ ಗುಂಪಿನ ಮೇಲೆ ಗುಂಡು ಹಾರಿಸಿದ್ದಾನೆ.

ಮನೆಯ ಹೊರಗೆ ಮಕ್ಕಳ ನೆರಳು ನೋಡಿದ ಆತ ಮನೆಯೊಳಗೆ ಹೋಗಿ ತನ್ನ ಬಂದೂಕು ತಂದು,
ತನ್ನ ಆಸ್ತಿಯಿಂದ ಓಡಿಹೋಗುತ್ತಿದ್ದ ಮಕ್ಕಳನ್ನ ನೋಡಿ ಗುಂಡು ಹಾರಿಸಿದ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

14 ವರ್ಷದ ಬಾಲಕಿಯ ತಲೆಯ ಹಿಂಭಾಗದಲ್ಲಿ ಗುಂಡು ಹಾರಿಸಲಾಗಿದ್ದು, ಆಕೆಯನ್ನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಕ್ಯಾಲ್ಕೇಸಿಯು ಪ್ಯಾರಿಷ್ ಶೆರಿಫ್ ಕಚೇರಿ ತಿಳಿಸಿದೆ.

ಗುಂಡಿನ ದಾಳಿ ನಡೆದ ಪ್ರದೇಶವು ಕೇವಲ ಮೂರು ನಿವಾಸಿಗಳನ್ನು ಹೊಂದಿರುವ ಡೆಡ್-ಎಂಡ್ ರಸ್ತೆಯಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular