alex Certify ತಂಪು ಪಾನೀಯ ಸೇವಿಸುವವರಿಗೆ ಸಿಗಲಿದೆ ಗುಡ್ ನ್ಯೂಸ್, ಸರ್ಕಾರ ಮಾಡುತ್ತಿದೆ ದೊಡ್ಡ ಪ್ಲಾನ್….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಂಪು ಪಾನೀಯ ಸೇವಿಸುವವರಿಗೆ ಸಿಗಲಿದೆ ಗುಡ್ ನ್ಯೂಸ್, ಸರ್ಕಾರ ಮಾಡುತ್ತಿದೆ ದೊಡ್ಡ ಪ್ಲಾನ್….!

ತಂಪು ಪಾನೀಯ ಪ್ರಿಯರಿಗೆ ಸದ್ಯದಲ್ಲೇ ಒಳ್ಳೆ ಸುದ್ದಿ ಕಾದಿದೆ. ಇದರಿಂದ ಜನಸಾಮಾನ್ಯರ ಜೊತೆಗೆ ಸಣ್ಣ ಉದ್ಯಮಿಗಳಿಗೂ ರಿಲೀಫ್‌ ಸಿಗಲಿದೆ. ಯಾಕಂದ್ರೆ ತಂಪು ಪಾನೀಯಗಳ ಮೇಲಿನ ಜಿಎಸ್‌ಟಿಯನ್ನು ತಗ್ಗಿಸಲು ಸರ್ಕಾರ ಮುಂದಾಗಿದೆ. ಪಾನೀಯಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದರವನ್ನು ಶೇ.28 ರಿಂದ ಕಡಿತಗೊಳಿಸುವಂತೆ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ ಒತ್ತಾಯಿಸಿತ್ತು.

ಸೆಸ್ ವಿಧಿಸಿದ ನಂತರ ಪರಿಣಾಮಕಾರಿ ದರವು ಶೇ.40 ಕ್ಕಿಂತ ಕಡಿಮೆ ಇರುತ್ತದೆ ಎನ್ನಲಾಗ್ತಿದೆ. ಪಾನೀಯಗಳ ಮೇಲಿನ ಜಿಎಸ್‌ಟಿ ದರವನ್ನು ಕಡಿಮೆ ಮಾಡಲು ಪರಿಗಣಿಸುವಂತೆ ಕೇಂದ್ರ ಹಣಕಾಸು ಸಚಿವಾಲಯಕ್ಕೆ CAIT ವಿನಂತಿಸಿದೆ. ಬದಲಾಗಿ ಸಕ್ಕರೆ ಆಧಾರಿತ ತೆರಿಗೆ (ಎಸ್‌ಬಿಟಿ) ಪದ್ಧತಿಯನ್ನು ಅಳವಡಿಸಿಕೊಳ್ಳಲು ಸಲಹೆ ನೀಡಿದೆ, ಇದರಲ್ಲಿ ಉತ್ಪನ್ನಗಳಲ್ಲಿನ ಸಕ್ಕರೆಯ ಪ್ರಮಾಣವನ್ನು ಆಧರಿಸಿ ತೆರಿಗೆ ದರಗಳನ್ನು ನಿಗದಿಪಡಿಸಲಾಗಿದೆ.

ಪಾನೀಯಗಳು ತುಂಬಾ ಕಡಿಮೆ ಸಕ್ಕರೆಯನ್ನು ಹೊಂದಿರುತ್ತವೆ.ಆದ್ದರಿಂದ ಈ ವ್ಯವಸ್ಥೆಯನ್ನು ಅಳವಡಿಸಿದ್ರೆ ತೆರಿಗೆ ಹೊರೆಯನ್ನು ಕಡಿಮೆ ಮಾಡುತ್ತದೆ. ಇದು ಚಿಲ್ಲರೆ ವ್ಯಾಪಾರಿಗಳಿಗೆ ಹೆಚ್ಚಿನ ಕೆಲಸದ ಬಂಡವಾಳವನ್ನು ನೀಡುತ್ತದೆ ಮತ್ತು ಅವರು ತಮ್ಮ ಮಾರಾಟವನ್ನು ಹೆಚ್ಚಿಸುವ ಮೂಲಕ ತಮ್ಮ ಆದಾಯವನ್ನು ದ್ವಿಗುಣಗೊಳಿಸಲು ಸಾಧ್ಯವಾಗುತ್ತದೆ. ಇದರಿಂದ ಜನ ಸಾಮಾನ್ಯರ ಗೃಹ ವೆಚ್ಚವೂ ಕಡಿಮೆಯಾಗಲಿದೆ ಅನ್ನೋದು ಅವರ ಅಭಿಪ್ರಾಯ.

ತಂಪು ಪಾನೀಯಗಳ ಮೇಲಿನ ಜಿಎಸ್‌ಟಿಯನ್ನು ಕಡಿಮೆ ಮಾಡುವ ವಿಷಯದ ಕುರಿತು ಅಭಿಯಾನವನ್ನು ಪ್ರಾರಂಭಿಸಲು ಕೂಡ ವ್ಯಾಪಾರಿಗಳ ಒಕ್ಕೂಟ ಮುಂದಾಗಿದೆ. ಸೆಪ್ಟೆಂಬರ್ 17, 2021 ರಂದು ನಡೆದ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ, ಕಾರ್ಬೊನೇಟೆಡ್ ಪಾನೀಯ ಉತ್ಪನ್ನಗಳ ಮೇಲೆ ಶೇ.28 ಮತ್ತು ಶೇ.12 ಸೆಸ್ ದರದಲ್ಲಿ ಜಿಎಸ್‌ಟಿ ವಿಧಿಸಲು ನಿರ್ಧರಿಸಲಾಗಿತ್ತು. ಕರೋನಾದಿಂದಾಗಿ ಈ ಉದ್ಯಮದ ಸ್ಥಿತಿ ಕೆಟ್ಟದಾಗಿದೆ.

ಕಳೆದ ಕೆಲವು ತಿಂಗಳುಗಳಲ್ಲಿ, ಜಿಎಸ್‌ಟಿ ಅಧಿಕಾರಿಗಳು ತೆರಿಗೆ ವಂಚನೆಯ ಹೆಸರಿನಲ್ಲಿ ಹಲವು ಸ್ಥಳೀಯ ಕಂಪನಿಗಳ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಇದರಿಂದ ಸ್ಥಳೀಯ ಸಂಸ್ಥೆಗಳು ಆಕ್ರೋಶಗೊಂಡಿವೆ.ಆದರೆ ಈ ಕಂಪನಿಗಳು ಹಣ್ಣಿನ ಪಾನೀಯಗಳ ಹೆಸರಿನಲ್ಲಿ ಸಿಹಿ ಪಾನೀಯಗಳನ್ನು ತಯಾರಿಸಿ ಲಾಭ ಗಳಿಸುತ್ತಿವೆ ಅನ್ನೋದು ಅಧಿಕಾರಿಗಳ ಆರೋಪ.  ಆ ಸಿಹಿಯಾದ ಪಾನೀಯಗಳ ಮೇಲಿನ ತೆರಿಗೆ ದರ ಶೇ.40ರಷ್ಟಿದೆ.

 

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...