HomeKarnatakaBIG NEWS: ಶಿವಣ್ಣ ವಿರುದ್ಧದ ಮಾತು ವಾಪಸ್ ಪಡೆದ ಪ್ರಶಾಂತ್ ಸಂಬರ್ಗಿ

BIG NEWS: ಶಿವಣ್ಣ ವಿರುದ್ಧದ ಮಾತು ವಾಪಸ್ ಪಡೆದ ಪ್ರಶಾಂತ್ ಸಂಬರ್ಗಿ

ಬೆಂಗಳೂರು: ನಟ ಶಿವರಾಜ್ ಕುಮಾರ್ ಹಣ ಪಡೆದು ಚುನಾವಣಾ ಪ್ರಚಾರ ಮಾಡ್ತಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿ ತೀವ್ರ ವಿವಾದಕ್ಕೆ ಕಾರಣರಾಗಿದ್ದ ಬಿಗ್ ಬಾಸ್ ಖ್ಯಾತಿಯ ಪ್ರಶಾಂತ್ ಸಂಬರ್ಗಿ, ತಮ್ಮ ಮಾತು ವಾಪಸ್ ಪಡೆದಿದ್ದಾರೆ.

ಶಿವರಾಜ್ ಕುಮಾರ್ ಕಾಂಗ್ರೆಸ್ ಪರ ಪ್ರಚಾರಕ್ಕೆ ತೆರಳಿದ್ದಕ್ಕೆ ಸಂಬರ್ಗಿ ಸಾಮಾಜಿಕ ಜಾಲತಾಣಗಳಲ್ಲಿ ಹಲವು ರೀತಿಯ ಪೋಸ್ಟ್ ಗಳನ್ನು ಹಾಕಿ ವಾಗ್ದಾಳಿ ನಡೆಸಿದ್ದರು. ಇದಕೆ ಗರಂ ಆಗಿದ್ದ ಶಿವಣ್ಣ, ನಾನು ಹಣ ಪಡೆದು ಪ್ರಚಾರಕ್ಕೆ ಬಂದಿಲ್ಲ, ವ್ಯಕ್ತಿಗಾಗಿ ಮನುಷತ್ವಕ್ಕಾಗಿ ಬಂದಿದ್ದೇನೆ. ಪ್ರಶಾಂತ್ ಸಂಬರ್ಗಿ ತಮ್ಮ ಮಾತನ್ನು ವಾಪಸ್ ಪಡೆಯಬೇಕು. ಸ್ವಲ್ಪ ಹೃದಯದಿಂದ ಯೋಚಿಸಿ ಮಾತನಾಡಿ ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಶಿವಣ್ಣನ ಅಭಿಮಾನಿಗಳು ಪ್ರಶಾಂತ್ ಸಂಬರ್ಗಿ ಕ್ಷಮೆ ಯಾಚಿಸುವಂತೆ ಪಟ್ಟು ಹಿಡಿದಿದ್ದರು. ಆಕ್ರೋಶ ಹೆಚ್ಚುತ್ತಿದ್ದಂತೆ ಹಳೆ ಪೋಸ್ಟ್ ಡಿಲಿಟ್ ಮಾಡಿರುವ ಪ್ರಶಾಂತ್ ಸಂಬರ್ಗಿ ಮತ್ತೊಂದು ಪೋಸ್ಟ್ ಹಾಕಿ ತಮ್ಮ ಮಾತು ಹಿಂಪಡೆದಿದ್ದಾಗಿ ತಿಳಿಸಿದ್ದಾರೆ.

ಶಿವಣ್ಣ ಅವರು ಎಲ್ಲಾ ರಾಜಕೀಯ ಪಕ್ಷಗಳಲ್ಲೂ ಸ್ನೇಹಿತರನ್ನು ಹೊಂದಿದ್ದಾರೆ. ತಂದೆಯ ಬಯಕೆಯಂತೆ ಶಿವಣ್ಣ ರಾಜಕೀಯದಿಂದ ದೂರವಾಗಿದ್ದಾರೆ. ನಾನು ಅವರ ಬಗ್ಗೆ ಬರೆದಿರುವ ನನ್ನ ಪೋಸ್ಟ್ ಹಿಂದಕ್ಕೆ ತೆಗೆದುಕೊಳ್ಳುತ್ತೇನೆ. ಶಿವಣ್ಣ ಹಾಗೂ ಅವರ ಅಭಿಮಾನಿಗಳು ಬೇಸರ ಮಾಡಿಕೊಳ್ಳಬಾರದು ಎಂದು ಸಂಬರ್ಗಿ ಬರೆದುಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular