HomeKarnatakaBIG NEWS: ಪ್ರಧಾನಿ ಮೋದಿ ರೋಡ್ ಶೋ; ನೃತ್ಯದ ಮೂಲಕ ಸ್ವಾಗತಿಸಲು ಸಿದ್ಧತೆ

BIG NEWS: ಪ್ರಧಾನಿ ಮೋದಿ ರೋಡ್ ಶೋ; ನೃತ್ಯದ ಮೂಲಕ ಸ್ವಾಗತಿಸಲು ಸಿದ್ಧತೆ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ರೋಡ್ ಶೋಗೆ ಕ್ಷಣಗಣನೆ ಆರ‍ಂಭವಾಗಿದ್ದು, ಕೆಲ ಹೊತ್ತಲ್ಲೇ ರಾಜಭವನದಿಂದ ಹೊರಡಲಿದ್ದಾರೆ. ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಮಧ್ಯಾಹ್ನ 1 ಗಂಟೆಯವರೆಗೂ ರೋಡ್ ಶೋ ಮೂಲಕ ಬಿಜೆಪಿ ಪರ ಅಬ್ಬರದ ಪ್ರಚಾರ ನಡೆಸಲಿದ್ದಾರೆ.

ಪ್ರಧಾನಿ ಮೋದಿ ನೋಡಲು ರಾಜಧಾನಿಯ ರಸ್ತೆಯ ಇಕ್ಕೆಲಗಳಲ್ಲಿ ಸಾಗರೋಪಾದಿಯಲ್ಲಿ ಜನರು ನೆರೆದಿದ್ದು, ಕಲಾತಂಡಗಳು, ನೃತ್ಯ ಕಲಾವಿದರು ವಾದ್ಯ ವೃಂದದವರು ರೋಡ್ ಶೋ ನಲ್ಲಿ ಭಾಗಿಯಾಗುತ್ತಿರುವುದು ವಿಶೇಷ.

ಬೆಂಗಳೂರಿನ ಜಯನಗರದ ಸೌತ್ ಎಂಡ್ ಸರ್ಕಲ್ ನಲ್ಲಿ ನೃತ್ಯದ ಮೂಲಕ ಪ್ರಧಾನಿ ಮೋದಿ ಸ್ವಾಗತಿಸಲು ಸೃಷ್ಟಿ ಕಲಾ ವಿದ್ಯಾಲಯದ ಕಲಾ ತಂಡ ಸಿದ್ಧತೆ ನಡೆಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular