ಸಕ್ಕರೆ ಕಾಯಿಲೆಗೆ ತುತ್ತಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಈ ಕಾಯಿಲೆಗೆ ಯಾವುದೇ ಚಿಕಿತ್ಸೆ ಇಲ್ಲ. ಔಷಧಗಳ ಸೇವನೆ ಮೂಲಕ ಮಧುಮೇಹವನ್ನು ನಿಯಂತ್ರಣದಲ್ಲಿಡಬೇಕು. ಡಯಾಬಿಟಿಸ್ ರೋಗಿಗಳ ಮನೆಮದ್ದುಗಳನ್ನು ಪ್ರಯತ್ನಿಸಿದ್ರೆ ಸಾಕಷ್ಟು ಪ್ರಯೋಜನ ಸಿಗುತ್ತದೆ.
ಇದರ ಜೊತೆಗೆ ಆಹಾರ ಕ್ರಮವನ್ನು ಬದಲಾಯಿಸುವ ಮೂಲಕ ಮಧುಮೇಹವನ್ನು ನಿಯಂತ್ರಿಸಬಹುದು. ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರಿಗೆ ಶುಂಠಿ ಪರಿಣಾಮಕಾರಿ ಮನೆಮದ್ದುಗಳಲ್ಲೊಂದು. ದಿನನಿತ್ಯ ಶುಂಠಿಯನ್ನು ಸೇವನೆ ಮಾಡಿದರೆ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ. ಆದರೆ ಶುಂಠಿಯನ್ನು ಯಾವ ವಿಧಾನದಲ್ಲಿ ಸೇವನೆ ಮಾಡಬೇಕು ಎಂಬುದು ಬಹಳ ಮುಖ್ಯ.
ಪ್ರತಿದಿನ ಮಾಡುವ ಪಲ್ಯ ಮತ್ತಿತರ ತಿನಿಸುಗಳಲ್ಲಿ ಶುಂಠಿಯನ್ನು ಸೇರಿಸಿ. ಬೇಳೆ ಸಾರು, ದಾಲ್, ಇತರ ತರಕಾರಿಗಳ ಪಲ್ಯಕ್ಕೆ ಶುಂಠಿಯನ್ನು ಹಾಕಿದರೆ ರುಚಿ ಕೂಡ ಹೆಚ್ಚುತ್ತದೆ. ಮಧುಮೇಹ ರೋಗಿಗಳು ಈ ರೀತಿಯಾಗಿ ನಿಯಮಿತವಾಗಿ ಶುಂಠಿ ಸೇವನೆ ಮಾಡಬಹುದು. ಶುಂಠಿ ಚಹಾದಿಂದ ಕೂಡ ಮಧುಮೇಹದ ಸಮಸ್ಯೆಯನ್ನು ನಿಯಂತ್ರಿಸಬಹುದು.
ಸ್ವಲ್ಪ ಶುಂಠಿಯನ್ನು ಜಜ್ಜಿಕೊಂಡು ಕುದಿಯುವ ನೀರಿಗೆ ಸೇರಿಸಿ ಚಹಾ ಮಾಡಿ. ನಂತರ ಇದನ್ನು ಫಿಲ್ಟರ್ ಮಾಡಿಕೊಂಡು ಕುಡಿಯಿರಿ. ಇದಕ್ಕೆ ನಿಂಬೆ ರಸ ಮತ್ತು ಜೇನುತುಪ್ಪವನ್ನು ಕೂಡ ಸೇರಿಸಬಹುದು.ಸಕ್ಕರೆ ಕಾಯಿಲೆ ಇರುವವರು ಶುಂಠಿ ಕ್ಯಾಂಡಿಯನ್ನು ಸಹ ಸೇವಿಸಬಹುದು. ಶುಂಠಿಯನ್ನು ತುರಿದು ಅದಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ ಮತ್ತು ಅದರಿಂದ ಕ್ಯಾಂಡಿ ತಯಾರಿಸಿಕೊಳ್ಳಿ. ಈ ಕ್ಯಾಂಡಿಯನ್ನು ದಿನಕ್ಕೆ ಎರಡು ಬಾರಿ ತಿನ್ನಿರಿ. ಇದರಿಂದ ನಿಮಗೆ ಸಾಕಷ್ಟು ಪ್ರಯೋಜನಗಳಾಗುತ್ತವೆ. ಮಧುಮೇಹ ರೋಗಿಗಳು ಇದನ್ನು ಪ್ರತಿದಿನ ಸೇವನೆ ಮಾಡಬಹುದು.