HomeAutoBIG NEWS: ಗಂಟೆಗೆ 300 ಕಿ.ಮೀ. ವೇಗದಲ್ಲಿ ಬೈಕ್ ಸಂಚಾರ; ಭೀಕರ ಅಪಘಾತದಲ್ಲಿ ಖ್ಯಾತ ಯೂಟ್ಯೂಬರ್...

BIG NEWS: ಗಂಟೆಗೆ 300 ಕಿ.ಮೀ. ವೇಗದಲ್ಲಿ ಬೈಕ್ ಸಂಚಾರ; ಭೀಕರ ಅಪಘಾತದಲ್ಲಿ ಖ್ಯಾತ ಯೂಟ್ಯೂಬರ್ ಸಾವು

ಗಂಟೆಗೆ 300 ಕಿಲೋಮೀಟರ್ ವೇಗದಲ್ಲಿ ಬೈಕ್ ಚಲಾಯಿಸ್ತಿದ್ದ ವೇಳೆ ಖ್ಯಾತ ಬೈಕ್ ರೈಡರ್ ಮತ್ತು ಯೂಟ್ಯೂಬರ್ ಆಗಸ್ತ್ಯ ಚೌಹಾಣ್ ಅವರು ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಯೂಟ್ಯೂಬ್‌ನಲ್ಲಿ 12 ಲಕ್ಷಕ್ಕೂ ಹೆಚ್ಚು ಚಂದಾದಾರರನ್ನು ಹೊಂದಿದ್ದ ಅಗಸ್ತ್ಯ ಅವರು ಆಗ್ರಾದಿಂದ ದೆಹಲಿಗೆ ತೆರಳುತ್ತಿದ್ದಾಗ ಯಮುನಾ ಎಕ್ಸ್ ಪ್ರೆಸ್‌ವೇಯ 47 ಕಿಲೋಮೀಟರ್ ಮೈಲಿಗಲ್ಲಿನಲ್ಲಿ ಈ ಘಟನೆ ಸಂಭವಿಸಿದೆ.

25 ವರ್ಷದ ರೈಡರ್ ಅಗಸ್ತ್ಯ ಡೆಹ್ರಾಡೂನ್ ನಿವಾಸಿಯಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚಿನ ಅನುಯಾಯಿಗಳನ್ನು ಹೊಂದಿದ್ದು ಹೆಸರು ಗಳಿಸಿದ್ದರು. ಅವರ ಅಕಾಲಿಕ ನಿಧನವು ಅವರ ಲಕ್ಷಾಂತರ ಅಭಿಮಾನಿಗಳಿಗೆ ಆಘಾತವನ್ನುಂಟು ಮಾಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವರದಿಗಳ ಪ್ರಕಾರ ಅವರ ಬೈಕ್ ಡಿವೈಡರ್‌ಗೆ ಡಿಕ್ಕಿ ಹೊಡೆದು ನಿಯಂತ್ರಣ ತಪ್ಪಿ ಡಿಕ್ಕಿಯಾಗಿದೆ. ಪರಿಣಾಮ ಅವರ ಹೆಲ್ಮೆಟ್ ಒಡೆದು, ಮಾರಣಾಂತಿಕ ಗಾಯಗಳಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಅಲಿಗಢ್ ಜಿಲ್ಲೆಯ ತಪ್ಪಲ್ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹವನ್ನು ಗ್ರೇಟರ್ ನೋಯ್ಡಾದ ಜೆವಾರ್‌ನಲ್ಲಿರುವ ಕೈಲಾಶ್ ಆಸ್ಪತ್ರೆಯ ಶವಾಗಾರಕ್ಕೆ ಕಳುಹಿಸಿದರು.

ಮೃತದೇಹದ ಮರಣೋತ್ತರ ಪರೀಕ್ಷೆಯ ನಂತರ ಅವರ ಕುಟುಂಬ ಸದಸ್ಯರಿಗೆ ಶವ ಹಸ್ತಾಂತರಿಸಲಾಗಿದೆ. ಈ ಘಟನೆಯನ್ನು ಗಮನದಲ್ಲಿಟ್ಟುಕೊಂಡು ವಾಹನ ಚಾಲಕರು ಜವಾಬ್ದಾರಿಯುತವಾಗಿ ಚಾಲನೆ ಮಾಡುವಂತೆ ಮತ್ತು ರಸ್ತೆಗಳಲ್ಲಿ ವೇಗವನ್ನು ತಪ್ಪಿಸುವಂತೆ ಅಲಿಗಢ ಪೊಲೀಸರು ಒತ್ತಾಯಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular