HomeAutoಕಾರ್ ಮತ್ತು ಬೈಕ್ ಗೆ ಡಿಕ್ಕಿಯಾಗಿ ಅಂಗಡಿಗೆ ನುಗ್ಗಿದ SUV; ಬೆಚ್ಚಿಬೀಳಿಸುತ್ತೆ ಭೀಕರ ಅಪಘಾತದ ವಿಡಿಯೋ

ಕಾರ್ ಮತ್ತು ಬೈಕ್ ಗೆ ಡಿಕ್ಕಿಯಾಗಿ ಅಂಗಡಿಗೆ ನುಗ್ಗಿದ SUV; ಬೆಚ್ಚಿಬೀಳಿಸುತ್ತೆ ಭೀಕರ ಅಪಘಾತದ ವಿಡಿಯೋ

ವ್ಯಾಗನಾರ್ ಕಾರು ಮತ್ತು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ನಂತರ ಎಸ್‌ಯುವಿ ಕಾರು ಅಂಗಡಿಯೊಳಕ್ಕೆ ನುಗ್ಗಿರುವ ಭೀಕರ ಅಪಘಾತ ಪ್ರಕರಣ ಕೇರಳದಲ್ಲಿ ನಡೆದಿದೆ. ಸಿಸಿ ಕ್ಯಾಮೆರಾದಲ್ಲಿ ಅಪಘಾತದ ದೃಶ್ಯ ಸೆರೆಯಾಗಿದೆ.
ಎಸ್ ಯು ವಿ ಜಖಂಗೊಂಡಿದ್ದು, ಇಬ್ಬರಿಗೆ ಗಂಭೀರ ಗಾಯಗಳಾಗಿವೆ.

ಪಥನಂತಿಟ್ಟ ಜಿಲ್ಲೆಯ ಕುರಂಬಳ ಬಳಿ ಬರ್ತಿದ್ದ ಎಸ್‌ಯುವಿ ಆರಂಭದಲ್ಲಿ ಕಾರಿಗೆ ಡಿಕ್ಕಿ ಹೊಡೆದು ಸಮತೋಲನ ಕಳೆದುಕೊಂಡು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಯಿತು. ನಂತರ ಅಂಗಡಿಗೆ ಡಿಕ್ಕಿ ಹೊಡೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದಾದ ಕೂಡಲೇ ಸುತ್ತಮುತ್ತಲಿನ ಜನರು ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ. ರಸ್ತೆಯ ಬದಿಯಲ್ಲಿ ಅಪಘಾತಕ್ಕೀಡಾದ ವ್ಯಾಗನಾರ್ ಮತ್ತು ದ್ವಿಚಕ್ರ ವಾಹನ ಸವಾರರಿಗೆ ಸಹಾಯ ಮಾಡಲು ಪ್ರಯತ್ನಿಸಿದರು. ಅಪಘಾತದಲ್ಲಿ ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಾಯಗಳಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಲಾಗಿದೆ.ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

For Latest News Updates, Join Our Whatsapp Community🚩
RELATED ARTICLES

Most Popular