HomeEntertainmentದೆಹಲಿ ಮೆಟ್ರೋ ರೈಲೊಳಗೆ ಪಂಜಾಬೀ ಹಾಡಿಗೆ ಹೆಜ್ಜೆ ಹಾಕಿದ ಮಹಿಳೆ

ದೆಹಲಿ ಮೆಟ್ರೋ ರೈಲೊಳಗೆ ಪಂಜಾಬೀ ಹಾಡಿಗೆ ಹೆಜ್ಜೆ ಹಾಕಿದ ಮಹಿಳೆ

ರೈಲುಗಳ ಒಳಗೆ ವಿಡಿಯೋ ರೆಕಾರ್ಡಿಂಗ್ ಮಾಡುವುದನ್ನು ನಿಷೇಧಿಸಿ ದೆಹಲಿ ಮೆಟ್ರೋ ಅದೆಷ್ಟೇ ಸುತ್ತೋಲೆಗಳನ್ನು ಹೊರಡಿಸಿದರೂ ಸಹ, ಪ್ರಯಾಣಿಕರು ಕೋಚ್‌ಗಳ ಒಳಗೆ ತಮ್ಮ ವಿಡಿಯೋಗ್ರಾಫಿ ನಿಲ್ಲಿಸುವಂತೆ ಕಾಣುತ್ತಿಲ್ಲ.

ದೆಹಲಿ ಮೆಟ್ರೋ ರೈಲೊಂದರ ಒಳಗೆ ಮಹಿಳೆಯೊಬ್ಬರು ಪಂಜಾಬೀ ಹಾಡೊಂದಕ್ಕೆ ನೃತ್ಯ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಕಾಕಾ ಹಾಡಿರುವ ’ಶೇಪ್‌’ ಹಾಡಿಗೆ ಈ ಯುವತಿ ಹೆಜ್ಜೆ ಹಾಕಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

“ಹೌದು ಇದಕ್ಕೆ ಅನುಮತಿ ಇಲ್ಲ. ಆದರೂ ಸಹ ನಾನು ದೆಹಲಿ ಮೆಟ್ರೋದಲ್ಲಿ ಇದೇ ಮೊದಲ ಬಾರಿಗೆ ಹೀಗೆ ಮಾಡುತ್ತಿದ್ದೇನೆ,” ಎಂದು ಕ್ಯಾಪ್ಷನ್ ಹಾಕಿ ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ itz_officialroy ಹೆಸರಿನ ಹ್ಯಾಂಡಲ್ ಹೊಂದಿರುವ ಈ ಯುವತಿ.

ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿರುವ ಈ ವಿಡಿಯೋಗೆ ಅದಾಗಲೇ ಎರಡು ದಶಲಕ್ಷ ವೀಕ್ಷಣೆಗಳು ಸಿಕ್ಕಿವೆ. ಕೆಲ ನೆಟ್ಟಿಗರು ಕಾಮೆಂಟ್‌ಗಳ ಮೂಲಕ ಈಕೆಯ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರೆ ಕೆಲವರು ನಿಷೇಧಾಜ್ಞೆ ಉಲ್ಲಂಘಿಸಿದ್ದಕ್ಕೆ ಟೀಕಿಸಿದ್ದಾರೆ.

https://youtu.be/ysQ_oEixilY

For Latest News Updates, Join Our Whatsapp Community🚩
RELATED ARTICLES

Most Popular