HomeInternationalಕೆಳಕ್ಕೆ ಬಿದ್ದು ಸ್ಕೈ ಡೈವರ್ ಸಾವು; ಬ್ರಿಟಿಷ್ ಪ್ಯಾರಾಗ್ಲೈಡರ್ ಅರೆಸ್ಟ್

ಕೆಳಕ್ಕೆ ಬಿದ್ದು ಸ್ಕೈ ಡೈವರ್ ಸಾವು; ಬ್ರಿಟಿಷ್ ಪ್ಯಾರಾಗ್ಲೈಡರ್ ಅರೆಸ್ಟ್

ಪ್ಯಾರಾಗ್ಲೈಡಿಂಗ್ ಮಾಡುವಾಗ ಬಹಳ ಎಚ್ಚರಿಕೆ ವಹಿಸುವುದು ಅಗತ್ಯ. ಸ್ವಲ್ಪ ಎಚ್ಚರ ತಪ್ಪಿದ್ರೂ ಅಪಾಯ ಕಟ್ಟಿಟ್ಟ‌ ಬುತ್ತಿ. ಇದೀಗ ಸ್ಕೈ ಡೈವ್ ಮಾಡುತ್ತಿರುವಾಗ ಉಂಟಾದ ಅಪಘಾತದಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟು, ಇನ್ನೋರ್ವ ಗಾಯಗೊಂಡಿರುವ ಘಟನೆ ನಡೆದಿದೆ. ಈ ಸಂಬಂಧ ಬ್ರಿಟಿಷ್ ಪ್ಯಾರಾಗ್ಲೈಡರ್ ಟರ್ಕಿಯಲ್ಲಿ ಬಂಧಿಸಲಾಗಿದೆ.

ಪ್ಯಾರಾಗ್ಲೈಡಿಂಗ್ ನಲ್ಲಿ 30 ವರ್ಷದ ಆರ್ಕುಟ್ ಬೈಸಲ್ ಸಾವನ್ನಪ್ಪಿದ್ದು, 45 ವರ್ಷದ ಅಂಡಾಕ್ ಅನ್ಸಾಲ್ ಗಾಯಗೊಂಡ ಕಾರಣ 45 ವರ್ಷದ ಥಾಮಸ್ ಐಟ್ಕೆನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಮುಗ್ಲಾ ಪ್ರಾಂತ್ಯದ ಟರ್ಕಿಯ ಫೆಥಿಯೆ ಜಿಲ್ಲೆಯಲ್ಲಿ ಗಾಳಿಯ ಪರಿಸ್ಥಿತಿಯಲ್ಲಿ ವಾಯು ದುರಂತ ಸಂಭವಿಸಿದೆ. ಐಟ್ಕೆನ್ ಏಕಾಂಗಿ ಜಿಗಿತವನ್ನು ನಡೆಸುತ್ತಿದ್ದ ಸಮಯದಲ್ಲಿ ಟರ್ಕಿಯ ಆರ್ಕುಟ್ ಮತ್ತು ಅಂಡಾಕ್ ಟಂಡೆಮ್ ಫ್ಲೈಟ್ ಅನ್ನು ನಿರ್ವಹಿಸುತ್ತಿದ್ದಾಗ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ.

ಇಳಿಯುವ ಸಮಯದಲ್ಲಿ, ಎರಡು ಪ್ಯಾರಾಚೂಟ್‌ಗಳು ನೆಲದಿಂದ ಕೇವಲ 20 ಮೀಟರ್‌ಗಳಷ್ಟು ಇಳಿಯುವಾಗ ಸಿಕ್ಕಿಹಾಕಿಕೊಂಡವು. ಸ್ಕೈಡೈವರ್‌ಗಳು ಈಜುಕೊಳದ ಅಂಚಿನಲ್ಲಿ ಇಳಿದು ಹೋಟೆಲ್ ಛಾವಣಿಗೆ ಅಪ್ಪಳಿಸಿದರು. ಕೂಡಲೇ ಪ್ಯಾರಾಗ್ಲೈಡರ್‌ಗಳನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಬೈಸಲ್ ಗೆ ತೀವ್ರ ಗಾಯಗಳುಂಟಾಗಿದ್ದರಿಂದ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಐಟ್ಕೆನ್ ಮತ್ತು ಉನ್ಸಾಲ್ ಎಂಬುವವರಿಗೆ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘರ್ಷಣೆಗೆ ಸಂಬಂಧಪಟ್ಟವರ ನಿರ್ಲಕ್ಷ್ಯ ಕಾರಣವೇ ಎಂಬ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular