HomeKarnatakaBIG NEWS: ಚುನಾವಣಾ ಸಿಬ್ಬಂದಿ ತೆರಳುತ್ತಿದ್ದ ಬಸ್ ಪಲ್ಟಿ; ಮೂವರ ಸ್ಥಿತಿ ಗಂಭೀರ

BIG NEWS: ಚುನಾವಣಾ ಸಿಬ್ಬಂದಿ ತೆರಳುತ್ತಿದ್ದ ಬಸ್ ಪಲ್ಟಿ; ಮೂವರ ಸ್ಥಿತಿ ಗಂಭೀರ

ವಿಜಯಪುರ: ಚುನಾವಣಾ ಕರ್ತವ್ಯದ ತರಬೇತಿಗೆ ತೆರಳುತ್ತಿದ್ದ ಸಿಬ್ಬಂದಿಯ ಬಸ್ ಪಲ್ಟಿಯಾಗಿ 12ಕ್ಕೂ ಹೆಚ್ಚು ಸಿಬ್ಬಂದಿಗಳು ಗಾಯಗೊಂಡಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಡವಳಗಿ ಹೊರವಲಯದಲ್ಲಿ ನಡೆದಿದೆ.

ಘಟನೆಯಲ್ಲಿ ಮೂವರು ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಮುದ್ದೇಬಿಹಾಳ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಜಯಪುರದ ಸಿಂದಗಿ ಪಟ್ಟಣದತ್ತ ತೆರಳುತ್ತಿದ್ದ ಬಸ್ ಏಕಾಏಕಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಮುದ್ದೆಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular