ಪತಿ ಸಾವಿನ ದುಃಖದಲ್ಲೂ ಮತದಾನ ಮಾಡಿ ಕರ್ತವ್ಯ ಪೂರೈಸಿದ ವೃದ್ಧೆ….!

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಒಂದು ದೊಡ್ಡ ಹಬ್ಬವಿದ್ದಂತೆ. ಹೀಗಾಗಿಯೇ ಮತದಾನದ ಮಹತ್ವ ಕುರಿತು ಅರಿವು ಮೂಡಿಸಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಇದರ ಮಧ್ಯೆ ವೃದ್ಧೆಯೊಬ್ಬರು ಪತಿ ಸಾವಿನ ದುಃಖದಲ್ಲೂ ಮತದಾನ ಮಾಡುವ ಮೂಲಕ ಇದರ ಮಹತ್ವ ಸಾರಿದ್ದಾರೆ.

ಧಾರವಾಡದ ಸಾರಸ್ವತ ಪುರ ಬಡಾವಣೆ ನಿವಾಸಿ ಶಾಂತಾಬಾಯಿ ಸೋಮವಾರದಂದು ಮತದಾನ ಮಾಡಿದವರಾಗಿದ್ದು, ಇವರ ಪತಿ 95 ವರ್ಷದ ಜ್ಯೋತಿಬಾ ತಿಬೇಲಿ ವಯೋಸಹಜ ಅನಾರೋಗ್ಯದಿಂದ ಭಾನುವಾರ ತಡರಾತ್ರಿ ಮೃತಪಟ್ಟಿದ್ದರು.

ಸೋಮವಾರ ಪಾರ್ಥಿವ ಶರೀರದ ದರ್ಶನಕ್ಕೆ ಜನ ಆಗಮಿಸುತ್ತಿದ್ದು, ಇದರ ಮಧ್ಯೆ ದಂಪತಿ ಹಿರಿಯರ ಮತದಾನಕ್ಕೆ ನೋಂದಣಿ ಮಾಡಿಸಿದ್ದ ಕಾರಣ ಚುನಾವಣಾ ಅಧಿಕಾರಿಗಳು ಸಹ ಬಂದಿದ್ದರು. ಮನೆಯಲ್ಲಿ ಸಾವಾಗಿದ್ದನ್ನು ಕಂಡು ಅವರು ತೆರಳಲು ಮುಂದಾದಾಗ ಶಾಂತಾಬಾಯಿ ಮತದಾನ ಮಾಡಲು ಒಪ್ಪಿಗೆ ನೀಡಿದ್ದಾರೆ. ಅದರಂತೆ ಅವರು ಮತ ಚಲಾಯಿಸಿದ್ದು, ಬಳಿಕ ಪತಿ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read