HomeSportsViral Video | ಬಾಲಿವುಡ್ ಹಾಡುಗಳಿಗೆ ಮಸ್ತ್‌ ಸ್ಟೆಪ್ ಹಾಕಿದ ಸ್ಕೇಟಿಂಗ್ ವಿಶ್ವ ಚಾಂಪಿಯನ್ ಬಾಲೆಯರು

Viral Video | ಬಾಲಿವುಡ್ ಹಾಡುಗಳಿಗೆ ಮಸ್ತ್‌ ಸ್ಟೆಪ್ ಹಾಕಿದ ಸ್ಕೇಟಿಂಗ್ ವಿಶ್ವ ಚಾಂಪಿಯನ್ ಬಾಲೆಯರು

ಮಾಜಿ ಒಲಿಂಪಿಯನ್ನರೂ ಆದ ಸ್ಕೇಟಿಂಗ್ ವಿಶ್ವ ಚಾಂಪಿಯನ್‌ಗಳಾದ ಮೆರೈಲ್ ಡೇವಿಸ್ ಹಾಗೂ ಚಾರ್ಲಿ ವೈಟ್ ಬಾಲಿವುಡ್‌ನ ಜನಪ್ರಿಯ ಹಾಡುಗಳಿಗೆ ಹೆಜ್ಜೆ ಹಾಕುತ್ತಿರುವ ಹಳೆಯ ವಿಡಿಯೋವೊಂದು ವೈರಲ್ ಆಗಿದೆ.

ಅಂತಾರಾಷ್ಟ್ರೀಯ ನೃತ್ಯ ದಿನಾಚರಣೆಯಂದು, ಒಲಿಂಪಿಕ್ಸ್‌ನ ಅಧಿಕೃತ ಪೇಜ್ ಈ ಜೋಡಿಯ ಐಸ್‌ ಸ್ಕೇಟಿಂಗ್ ವಿಡಿಯೋ ಶೇರ್‌ ಮಾಡಿದೆ. ಸ್ಕೇಟಿಂಗ್ ಬಾಲೆಯರ ಹಾಡಿನ ಆಯ್ಕೆ ಹಾಗೂ ಆಕರ್ಷಕ ಉಡುಗೆಗಳು ಈ ವಿಡಿಯೋವನ್ನು ಇನ್ನಷ್ಟು ಸುಂದರವಾಗಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

2005ರ ’ಬಂಟಿ ಔರ್‌ ಬಬ್ಲಿ’ ಚಿತ್ರದ ’ಕಜ್ರಾ ರೇ’ ಹಾಡಿಗೆ ಮಸ್ತ್‌ ಸ್ಟೆಪ್ ಹಾಕಿರುವ ಈ ಜೋಡಿ, 2010ರಲ್ಲಿ ವ್ಯಾಂಕುವರ್‌‌ನಲ್ಲಿ ಪ್ರದರ್ಶನ ನೀಡುವ ವೇಳೆ ಇನ್ನೆರೆಡು ಬಾಲಿವುಡ್ ಹಾಡುಗಳಿಗೆ ಹೆಜ್ಜೆ ಹಾಕಿತ್ತು. 2002ರಲ್ಲಿ ಬಿಡುಗಡೆಯಾದ ’ದೇವದಾಸ್’ ಚಿತ್ರದ ’ಸಿಲ್ಸಿಲಾ ಯೇ ಚಾಹತ್‌ ಕಾ’ ಮತ್ತು ’ಡೋಲಾ ರೇ ಡೋಲಾ’ ಹಾಡುಗಳಿಗೆ ಈ ಜೋಡಿ ಕುಣಿದಿತ್ತು.

ನಾಜೂಕಾದ ತಿರುವುಗಳು, ಕಥಕ್ ಹೆಜ್ಜೆಗಳು ಹಾಗೂ ನೆಗೆತಗಳಿಂದ ತುಂಬಿರು ಈ ನೃತ್ಯವನ್ನು ನೋಡಿದ ನೆಟ್ಟಿಗರು ಭೇಷ್ ಎನ್ನುತ್ತಿದ್ದಾರೆ. ಈ ವಿಡಿಯೋಗೆ 46,000+ ಲೈಕ್‌ಗಳು ಸಂದಾಯವಾಗಿವೆ.

For Latest News Updates, Join Our Whatsapp Community🚩
RELATED ARTICLES

Most Popular