HomeIndiaಗುಜರಾತ್ ಸಿಎಂ ಎದುರು ನಿದ್ರೆಗೆ ಜಾರಿದ ಅಧಿಕಾರಿ; ವಿಡಿಯೋ ವೈರಲ್ ಆಗುತ್ತಲೇ ಸಸ್ಪೆಂಡ್

ಗುಜರಾತ್ ಸಿಎಂ ಎದುರು ನಿದ್ರೆಗೆ ಜಾರಿದ ಅಧಿಕಾರಿ; ವಿಡಿಯೋ ವೈರಲ್ ಆಗುತ್ತಲೇ ಸಸ್ಪೆಂಡ್

ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಪಾಲ್ಗೊಂಡಿದ್ದ ಕಾರ್ಯಕ್ರಮದ ವೇಳೆಯಲ್ಲಿ ಅಧಿಕಾರಿಯೊಬ್ಬರು ಗಾಢ ನಿದ್ರೆಗೆ ಜಾರಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ಅವರನ್ನು ಈಗ ಸಸ್ಪೆಂಡ್ ಮಾಡಲಾಗಿದೆ.

ಭುಜ್ ನಗರಸಭೆ ಅಧಿಕಾರಿ ಜಿಗರ್ ಪಟೇಲ್ ಅಮಾನತುಗೊಂಡ ಅಧಿಕಾರಿಯಾಗಿದ್ದು, ಇತ್ತೀಚೆಗೆ ಕಚ್ ಭೂಕಂಪ ಪೀಡಿತ ಸಂತ್ರಸ್ತರಿಗೆ ಮನೆ ಹಕ್ಕು ಪತ್ರ ವಿತರಿಸುವ ಕಾರ್ಯಕ್ರಮದಲ್ಲಿ ನಿದ್ರೆಗೆ ಜಾರಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದರ ವಿಡಿಯೋ ಆಧರಿಸಿ ಇದೀಗ ನಗರಾಭಿವೃದ್ಧಿ ಇಲಾಖೆ ಗುಜರಾತ್ ನಾಗರೀಕ ಸೇವೆ 1971 ರ ನಿಯಮ 5(1) (ಎ) ಅಡಿ ಅಮಾನತುಗೊಳಿಸಿ ಆದೇಶ ಹೊರಡಿಸಿದೆ.

For Latest News Updates, Join Our Whatsapp Community🚩
RELATED ARTICLES

Most Popular