ಆಸ್ಟ್ರೇಲಿಯಾ: ಇದು 10 ವರ್ಷಗಳ ಹಿಂದೆ ನಡೆದ ತಮಾಷೆಯ ಘಟನೆಯಾಗಿದ್ದು, ಇದೀಗ ದಶಕ ಪೂರೈಸಿದ್ದ ಹಿನ್ನೆಲೆಯಲ್ಲಿ ಮತ್ತೊಮ್ಮೆ ವೈರಲ್ ಆಗಿದೆ.
ಆಸ್ಟ್ರೇಲಿಯಾದಲ್ಲಿ ನಡೆದ ಘಟನೆ ಇದಾಗಿದೆ. ಆಸ್ಟ್ರೇಲಿಯನ್ ವ್ಯಕ್ತಿ ಪೊಲೀಸ್ ಅಧಿಕಾರಿಯೊಂದಿಗೆ ಕುಡಿದು ಜಗಳವಾಡಿದ ದೃಶ್ಯ ಇದಾಗಿದೆ. ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡಲಾದ ವೀಡಿಯೊವನ್ನು ಆಸ್ಟ್ರೇಲಿಯಾದ ರಿಯಾಲಿಟಿ ಟಿವಿ ಶೋ ಹೈವೇ ಪ್ಯಾಟ್ರೋಲ್ನಿಂದ ತೆಗೆದುಕೊಳ್ಳಲಾಗಿದೆ.
ಕ್ಲಿಂಟನ್ ಎಂಬಾತ ವಿಪರೀತ ಕುಡಿದು ಚಾಲನೆ ಮಾಡುತ್ತಿದ್ದ. ಆತನ ಕಾರು ಪಂಚರ್ ಆಗಿದ್ದನ್ನು ವಿಡಿಯೋದಲ್ಲಿ ನೋಡಬಹುದು. ಆದರೆ ಅಲ್ಲಿಗೆ ಬಂದ ಪೊಲೀಸರನ್ನು ಕಂಡು ಆತ ಕಕ್ಕಾಬಿಕ್ಕಿಯಾದ. ಕಾರು ಪಂಕ್ಚರ್ ಆಗಿದೆ ಎಂದು ಹೇಳಿದರೆ, ಪೊಲೀಸರು ತನಿಖೆ ಮಾಡುತ್ತಾರೆ, ಆಗ ತಾನು ಕುಡಿದದ್ದು ತಿಳಿಯುತ್ತದೆ ಎಂದು ಅಂದುಕೊಂಡ ಆತ ಅದರಿಂದ ತಪ್ಪಿಸಿಕೊಳ್ಳಲು ತಾನು ಸಂಗಾತಿಗೆ ವೇಟ್ ಮಾಡುತ್ತಿರುವುದಾಗಿ ಪದೇ ಪದೇ ಹೇಳುತ್ತಿರುವುದನ್ನು ವಿಡಿಯೋದಲ್ಲಿನೋಡಬಹುದು.
ಸಂಗಾತಿ ಹೆಸರು ಕೇಳಿದಾಗ ಕಕ್ಕಾಬಿಕ್ಕಿಯಾದ ಆತ ಜೇಮ್ಸ್ ಎಂದ. ಇದರಿಂದ ಸಂದೇಹಗೊಂಡ ಪೊಲೀಸರು ಕೊನೆಗೂ ಆತನ ಬಾಯಿ ಬಿಡಿಸಿದ್ದರು. ಅವನ ಪರವಾನಗಿ ರದ್ದುಗೊಳಿಸಲಾಗಿತ್ತು. ದಶಕ ಪೂರೈಸಿದ ಹಿನ್ನೆಲೆಯಲ್ಲಿ ಮತ್ತೆ ಇದು ವೈರಲ್ ಆಗಿದೆ.