HomeInternationalಹೌಸ್ ಸಿಟ್ಟಿಂಗ್ ಮಾಡಿಕೊಂಡೇ ವಿಶ್ವ ಸುತ್ತಲು ಮುಂದಾಗಿದೆ ಈ ಜೋಡಿ

ಹೌಸ್ ಸಿಟ್ಟಿಂಗ್ ಮಾಡಿಕೊಂಡೇ ವಿಶ್ವ ಸುತ್ತಲು ಮುಂದಾಗಿದೆ ಈ ಜೋಡಿ

ಬರೀ ಹೌಸ್‌ ಸಿಟ್ಟಿಂಗ್ ಹಾಗೂ ಡಾಗ್ ಸಿಟ್ಟಿಂಗ್ ಮಾಡುವ ಮೂಲಕ ಐರ್ಲೆಂಡ್‌ನ ಜೋಡಿಯೊಂದು ಜಗತ್ತನ್ನೇ ಸುತ್ತಾಡಲು ಹೊರಟಿದ್ದಾರೆ ಎಂದು ನಾವು ನಿಮಗೆ ಹೇಳಿದರೆ ನಂಬುತ್ತೀರಾ ?

ಮೋಲ್ಲಿ ಹಾಗೂ ಗಾರ್ತ ಹೆಸರಿನ ಈ ಜೋಡಿ ಭಾರೀ ಟೈಟ್ ಬಜೆಟ್‌ನಲ್ಲಿ ಪ್ರಪಂಚ ಸುತ್ತಾಟಕ್ಕೆ ತೆರಳಿದೆ. ಈ ವೇಳೆ ತಮ್ಮ ಖರ್ಚುವೆಚ್ಚಗಳನ್ನು ನಿಭಾಯಿಸಲೆಂದು ಅಪರಿಚಿತರ ಮನೆಗಳಲ್ಲಿ ಮಾಲೀಕರು ಹೊರಗೆ ಹೋಗಿದ್ದ ವೇಳೆ ಅವರ ಮನೆಗಳನ್ನು ನೋಡಿಕೊಳ್ಳುವ ಕೆಲಸ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನ್ಯೂಯಾರ್ಕ್, ಆಮ್‌ಸ್ಟರ್ಡ್ಯಾಂ, ಬಾರ್ಸಿಲೋನಾಗಳಲ್ಲಿ 17 ಅಪರಿಚಿತರ ಮನೆಗಳಲ್ಲಿ ಹೌಸ್‌ ಸಿಟ್ಟಿಂಗ್ ಹಾಗೂ ಡಾಗ್ ಸಿಟ್ಟಿಂಗ್ ಮಾಡಿದ್ದಾರೆ ಈ ಜೋಡಿ. ಐರ್ಲೆಂಡ್ ಹಾಗು ವಿದೇಶಗಳಲ್ಲಿ ಸದಾ ಸುತ್ತಾಡುತ್ತಲೇ ಇರುವ ಇಬ್ಬರಿಗೂ ಸ್ಥಿರ ನಿವಾಸ ಎಂಬುದು ಇಲ್ಲದೇ ಇರುವ ಕಾರಣ ಹೀಗೆ ಮನೆಯ ಬಾಡಿಗೆಯ ದುಡ್ಡು ಉಳಿಸಿದ್ದಾರೆ ಈ ಕಿಲಾಡಿ ಜೋಡಿ.

“ನಾವು ವಾಸವಿದ್ದ ಮನೆಗಳು ನಿಜಕ್ಕೂ ಸುಂದರವಾಗಿದ್ದವು, ಹಾಗೂ ಎಲ್ಲಾ ಆಧುನಿಕ ಸವಲತ್ತುಗಳನ್ನು ಹೊಂದಿದ್ದವು. ಮಾಲೀಕರು ಹಾಗೂ ಮನೆಗಳ ಕೊರತೆಯ ನೋವಿಂದ ಹೀಗೆ ಪಾರಾಗಿದ್ದು ಒಂದು ಸೌಭಾಗ್ಯ,” ಎಂದು ತಿಳಿಸಿದ್ದಾರೆ ಮೊಲ್ಲಿ.

ಮೇ 2022ರಲ್ಲಿ ಟಿಕ್‌ಟಾಕ್ ವಿಡಿಯೋಗಳನ್ನು ನೋಡುತ್ತಿದ್ದ ಮೋಲ್ಲಿಗೆ, ತಮ್ಮಂತೆಯೇ ಹೌಸ್‌ ಸಿಟ್ಟಿಂಗ್ ಕೆಲಸ ಮಾಡುತ್ತಿದ್ದ ಅನುಭವ ಹೇಗಿರುತ್ತದೆ ಹಾಗೂ ಅದರಿಂದ ಹೇಗೆಲ್ಲಾ ಪ್ರಯೋಜನ ಪಡೆಯಬಹುದು ಎಂದು ವಿವರಿಸುತ್ತಿದ್ದ ವಿಡಿಯೋವೊಂದನ್ನು ನೋಡಿ ತಾವೂ ಸಹ ಹೀಗೆ ಮಾಡಲು ನಿರ್ಧರಿಸಿದ್ದಾರೆ ಈ ಜೋಡಿ.

For Latest News Updates, Join Our Whatsapp Community🚩
RELATED ARTICLES

Most Popular