HomeIndiaಹಾರಲು ಬಿಡುವುದಕ್ಕಾಗಿಯೇ ಪಕ್ಷಿಗಳನ್ನು ಖರೀದಿಸಿದ ವ್ಯಕ್ತಿ: ನೆಟ್ಟಿಗರಿಂದ ಶ್ಲಾಘನೆ

ಹಾರಲು ಬಿಡುವುದಕ್ಕಾಗಿಯೇ ಪಕ್ಷಿಗಳನ್ನು ಖರೀದಿಸಿದ ವ್ಯಕ್ತಿ: ನೆಟ್ಟಿಗರಿಂದ ಶ್ಲಾಘನೆ

ಒಬ್ಬ ವ್ಯಕ್ತಿಯು ಮಾರಾಟಗಾರರಿಂದ ಪಂಜರದಲ್ಲಿ ಇರಿಸಲಾದ ಅನೇಕ ಪಕ್ಷಿಗಳನ್ನು ನೋಡಿದಾಗ, ಅವನು ತನ್ನ ವಾಹನವನ್ನು ನಿಲ್ಲಿಸಿ ಪಕ್ಷಿಗಳನ್ನು ಖರೀದಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗುತ್ತಿದೆ.
ಇದಕ್ಕೆ ಕಾರಣ ಕುತೂಹಲವಾಗಿದೆ. ವ್ಯಕ್ತಿಯು ಕಾರನ್ನು ನಿಲ್ಲಿಸಿ ಹಕ್ಕಿಯನ್ನು ಖರೀದಿಸಿ ಅದನ್ನು ಅಲ್ಲಿಯೇ ಹಾರಲು ಬಿಟ್ಟಿದ್ದಾನೆ. ಪಂಜರದಲ್ಲಿರುವ ಪಕ್ಷಿಗಳನ್ನು ಬಿಡಿಸುವ ಕಾರ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ನೆಟ್ಟಿಗರು ಫಿದಾ ಆಗಿದ್ದಾರೆ.

ವರದಿಯ ಪ್ರಕಾರ, ಈ ವೀಡಿಯೊ ಕೆಲವು ವರ್ಷಗಳ ಹಿಂದೆ ಅಂತರ್ಜಾಲದಲ್ಲಿ ಕಾಣಿಸಿಕೊಂಡಿತು ಮತ್ತು ಇದು ನೆಟಿಜನ್‌ಗಳನ್ನು ಆಕರ್ಷಿಸಲು 2023 ರಲ್ಲಿ ಮರಳಿದೆ. ಆದಾಗ್ಯೂ, ಈ ಕಾರ್ಯ ಶ್ಲಾಘನೀಯ ಎಂದು ಹಲವರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇವರೇನೋ ಅದನ್ನು ಬಿಡುಗಡೆ ಮಾಡಿದರು. ಆದರೆ ಮಾರಾಟಗಾರರು ಪುನಃ ಅವುಗಳನ್ನು ಬಲೆಗೆ ಬೀಳಿಸಿ ಬೇರೆಯವರಿಗೆ ಮಾರಾಟ ಮಾಡುವ ಮೂಲಕ ಮತ್ತೆ ಹಣ ಗಳಿಸುತ್ತಾರೆ ಎಂಬ ನೋವನ್ನು ಅನೇಕರು ವ್ಯಕ್ತಪಡಿಸಿದ್ದಾರೆ.

https://twitter.com/_B___S/status/1650988873365766144?ref_src=twsrc%5Etfw%7Ctwcamp%5Etweetembed%7Ctwterm%5E1650988873365766144%7Ctwgr%5E42bb3b44c4f127b34709178bf2a12540d854996e%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fwatch-man-buys-caged-birds-only-to-free-them-into-the-air-viral-video-will-melt-your-heart

 

For Latest News Updates, Join Our Whatsapp Community🚩
RELATED ARTICLES

Most Popular