ಅಯ್ಯೋ……. ಈ ಸೆಖೆಗೆ ಇರಲಾಗುತ್ತಿಲ್ಲ ಅಂತಾ ಕೋಪ ನಿಮ್ಮಲ್ಲಿದ್ದರೆ, ನಿಮಗೆ ನಗು ತರಿಸುವ ಸುದ್ದಿಯೊಂದನ್ನು ನಾವು ನೀಡುತ್ತೇವೆ. ವ್ಯಕ್ತಿಯೊಬ್ಬರು ತನ್ನ ತಂದೆ ಹಾಗೂ ಮಾವ ಕಾರಿನ ಹಿಂಬದಿ ಸೀಟಿನಲ್ಲಿ ಮಲಗಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ಇದು ನೋಡಿದ ನೆಟ್ಟಿಗರು ನಕ್ಕಿದ್ದಾರೆ.
ಈ ಪೋಸ್ಟ್ ಅನ್ನು ಮಂದರ್ ನಾಟೇಕರ್ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಮೂವರು ರಸ್ತೆ ಪ್ರವಾಸ ಕೈಗೊಂಡ ವೇಳೆ ಅವರ ತಂದೆ ಮತ್ತು ಮಾವ ಕಾರಿನ ಹಿಂದಿನ ಸೀಟಿನಲ್ಲಿ ನಿದ್ರಿಸುತ್ತಿದ್ದಾರೆ. ಈ ಫೋಟೋವನ್ನು ಹಂಚಿಕೊಳ್ಳುತ್ತಾ ವೃದ್ಧರನ್ನು ಮಕ್ಕಳಿಗೆ ಹೋಲಿಸಿ ಬರೆದಿದ್ದಾರೆ.
ಇಬ್ಬರೂ ಅಪ್ಪಂದಿರನ್ನು ರಸ್ತೆ ಪ್ರವಾಸಕ್ಕೆ ಕರೆದುಕೊಂಡು ಹೋಗುವುದು ಎಂದರೆ ಎರಡು ಮಕ್ಕಳನ್ನು ಕರೆದುಕೊಂಡು ಹೋಗುವುದಕ್ಕಿಂತ ಕಡಿಮೆ ಏನಲ್ಲ. ಹೆಚ್ಚು ನಿದ್ದೆ ಮಾಡುವುದು. ಅವರು ಎದ್ದಾಗ, ಅವರಿಗೆ ಆಹಾರ, ಚಹಾ, ಕೊಂಚ ಬ್ರೇಕ್, ನಂತರ ಮತ್ತೆ ನಿದ್ದೆ ಮತ್ತು ನಂತರ ಈ ಸೈಕಲ್ ಪುನರಾವರ್ತನೆಯಾಗುತ್ತದೆ. ನಡುವೆ, ಮಾತು ಮತ್ತು ಹಳೆಯ ಕಥೆಗಳು ಕೇಳೋದಕ್ಕೆ ಒಂಥರಾ ಮಜಾ ಇರುತ್ತದೆ ಎಂದು ಮಂದರ್ ಶೀರ್ಷಿಕೆಯಲ್ಲಿ ತಿಳಿಸಿದ್ದಾರೆ.
ಈ ಪೋಸ್ಟ್ ನಿಸ್ಸಂಶಯವಾಗಿ ನೆಟ್ಟಿಗರ ಗಮನ ಸೆಳೆಯಿತು. ಇದು ಅದ್ಭುತ ಕ್ಷಣವಲ್ಲದೆ ಮತ್ತಿನ್ನೇನು ಎಂದು ಬಳಕೆದಾರರು ಸಂತಸದಿಂದ ಪ್ರತಿಕ್ರಿಯಿಸಿದ್ದಾರೆ.
Taking both dads on a road trip is nothing short of taking two kids along. Naps galore, when they wake up they want food, chai, loo break then nap again and then the cycle repeats. In between peppered with anecdotes and old stories…mazaa ! pic.twitter.com/zxK8IGIjvu
— Mandar Natekar (@mandar2404) April 25, 2023
This is so cute
— Neha 🇮🇳 (@nehakanand) April 26, 2023
That’s such a cute pic! My favourite travel buddies are my dad and father in law 😊❤️ and they almost behave the same way 😂
— 𝐊𝐚𝐮𝐬𝐚𝐫 𝐊𝐡𝐚𝐧 (@Kausarcsp) April 26, 2023

