HomeInternationalಮೆಕ್ಸಿಕೋ ಕಡಲ ತೀರದಲ್ಲಿ ಅತ್ಯಂತ ಆಳದ ನೀಲಿ ರಂಧ್ರ‌ ಪತ್ತೆ; ಫೋಟೋ ವೈರಲ್

ಮೆಕ್ಸಿಕೋ ಕಡಲ ತೀರದಲ್ಲಿ ಅತ್ಯಂತ ಆಳದ ನೀಲಿ ರಂಧ್ರ‌ ಪತ್ತೆ; ಫೋಟೋ ವೈರಲ್

ಮೆಕ್ಸಿಕೋದ ಯುಕಾಟನ್ ಪರ್ಯಾಯ ದ್ವೀಪದಲ್ಲಿ ಜಗತ್ತಿನ ಎರಡನೇ ಅತ್ಯಂತ ಆಳವಾದ ನೀಲಿ ರಂಧ್ರ ಪತ್ತೆಯಾಗಿದೆ. 900 ಅಡಿ ಆಳ ಹಾಗೂ 1,47,000 ಚದರ ಅಡಿ ವಿಸ್ತಾರವಿರುವ ಈ ರಂಧ್ರವು ಚೆಟುಮಾಲ್ ಕೊಲ್ಲಿಯಲ್ಲಿ ಪತ್ತೆಯಾಗಿದೆ ಎಂದು ಲೈವ್‌ ಸೈನ್ಸ್‌ ನಿಯಕಾಲಿಕೆ ತಿಳಿಸಿದೆ.

ಈ ರಂಧ್ರಗಳಲ್ಲಿ ಅಲ್ಪ ಪ್ರಮಾಣದ ಆಮ್ಲಜನಕವಿದ್ದು, ಮೇಲ್ಮೈಯಲ್ಲಿ ಸೂರ್ಯನ ಬೆಳಕು ಪ್ರತಿಫಲಿಸುತ್ತದೆ. ಕಡಿಮೆ ಆಮ್ಲಜನಕದ ವಾತಾವರಣಕ್ಕೆ ಹೊಂದಿಕೊಂಡ ಜೀವರಾಶಿಗೆ ಈ ರಂಧ್ರಗಳು ಮನೆಯಾಗಿರುತ್ತವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಧ್ಯಯನದ ಪ್ರಕಾರ ಇದು ಜಗತ್ತಿನ ಎರಡನೇ ಅತ್ಯಂತ ಆಳವಾದ ನೀಲಿ ರಂಧ್ರವಾಗಿದೆ. ದಕ್ಷಿಣ ಚೀನಾ ಸಮುದ್ರದ ’ಡ್ರ‍್ಯಾಗನ್ ಹೋಲ್’, 980 ಅಡಿ ಆಳ, ಜಗತ್ತಿನ ಅತ್ಯಂತ ಆಳವಾದ ರಂಧ್ರವಾಗಿದೆ.

ಸುಣ್ಣದ ಕಲ್ಲಿನಿಂದ ರಚಿಸಲ್ಪಟ್ಟ ಈ ರಂಧ್ರಗಳು ಬೆಳಕಿನ ಅಭಾವದಿಂದ ಹಾಗೂ ಮರಗಳು ಹಾಗೂ ಎಲೆಗಳ ಮೇಲೆ ಕೊಳೆಯುತ್ತಿರುವ ಹುಳುಗಳ ಕಾರಣದಿಂದ ಗಾಢ ನೀಲಿ ಬಣ್ಣದಲ್ಲಿ ಗೋಚರಿಸುತ್ತವೆ ಎಂದು ಡಿಸ್ಕವರಿಯ ಜಾಲತಾಣ ತಿಳಿಸುತ್ತದೆ.

ಸಾವಿರಾರು ವರ್ಷಗಳ ಹಿಂದೆ ಜೀವನ ಹೇಗಿತ್ತು ಎಂದು ಈ ನೀಲಿ ರಂಧ್ರಗಳು ತಿಳಿಸಲಿದ್ದು, ಅನ್ಯ ಗ್ರಹಗಳಲ್ಲಿನ ಜೀವವ್ಯವಸ್ಥೆಗಳ ಕುರಿತು ಅಂದಾಜು ನೀಡಬಹುದು ಎಂದು ಲೈವ್ಸ್‌ ಸೈನ್ಸ್ ವರದಿಯಲ್ಲಿ ತಿಳಿಸಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular