
ಇಂದು 224 ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ನಾಮಪತ್ರ ಪರಿಶೀಲನೆ ನಡೆಯುತ್ತಿದೆ. ರಾಜಕೀಯ ಪಕ್ಷಗಳ ಏಜೆಂಟರು ಹಾಗೂ ಅಭ್ಯರ್ಥಿಗಳ ಸಮ್ಮುಖದಲ್ಲಿ ನಾಮಪತ್ರ ಪರಿಶೀಲನೆ ನಡೆಯಲಿದೆ.
ನಾಮಪತ್ರ ಪರಿಶೀಲನೆ ವೆಳೆ ನಾಲ್ವರಿಗೆ ಮಾತ್ರ ಹಾಜರಿರಲು ಅವಕಾಶವಿರುತ್ತದೆ. ಖುದ್ದು ಅಭ್ಯರ್ಥಿ ಅಥವಾ ಅಭ್ಯರ್ಥಿಯಾಗಲು ನೆಮಕ ಮಾಡಿರುವ ಏಜೆಂಟ್ ಕೂಡ ನಾಮಪತ್ರ ಪರಿಶೀಲನೆ ವೇಳೆ ಹಾಜರಿರಬಹುದು.

