HomeLatest NewsRCB ಎದುರಿನ ಪಂದ್ಯ ಮುಗಿದ ಬೆನ್ನಲ್ಲೇ ಡೆಲ್ಲಿಗೆ ಶಾಕ್: 16 ಬ್ಯಾಟ್, ಶೂ, ಗ್ಲೌಸ್, ಪ್ಯಾಡ್...

RCB ಎದುರಿನ ಪಂದ್ಯ ಮುಗಿದ ಬೆನ್ನಲ್ಲೇ ಡೆಲ್ಲಿಗೆ ಶಾಕ್: 16 ಬ್ಯಾಟ್, ಶೂ, ಗ್ಲೌಸ್, ಪ್ಯಾಡ್ ಕಳವು

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯ ಮುಗಿದ ನಂತರ ಡೆಲ್ಲಿ ಕ್ರಿಕೆಟಿಗರ 16 ಬ್ಯಾಟ್, ಶೂ, ಗ್ಲೌಸ್, ಪ್ಯಾಡ್ ಗಳನ್ನು ಕಳವು ಮಾಡಲಾಗಿದೆ.

ಬೆಂಗಳೂರಿನಲ್ಲಿ ಪಂದ್ಯ ಮುಗಿದ ನಂತರ ಡೆಲ್ಲಿ ಕ್ಯಾಪಿಟಲ್ಸ್ ಆಟಗಾರರ ಬ್ಯಾಟ್ ಸೇರಿದಂತೆ ಕೆಲವು ವಸ್ತುಗಳು ಕಳುವಾಗಿದ್ದು, ಈ ಕುರಿತಾಗಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಡೇವಿಡ್ ವಾರ್ನರ್ ಅವರಿಗೆ ಸೇರಿದ ಮೂರು ಬ್ಯಾಟ್, ವಿಚಲ್ ಮಾರ್ಷ್ ಅವರ ಎರಡು ಬ್ಯಾಟ್ ಗಳು ಮತ್ತು ಫಿಲ್ ಸಾಲ್ಟ್ ಅವರ ಮೂರು ಹಾಗೂ ಯಶ್ ಧೂಳ್ ಅವರ ಐದು ಬ್ಯಾಟ್ ಗಳು ಕಳುವಾಗಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೆಲವು ಆಟಗಾರರಿಗೆ ಸೇರಿದ 16 ಲಕ್ಷ ಮೌಲ್ಯದ ಬ್ಯಾಟ್‌ ಗಳು, ಪ್ಯಾಡ್‌ ಗಳು ಮತ್ತು ಇತರ ಉಪಕರಣಗಳನ್ನು ಸಾಗಣೆಯಲ್ಲಿ ಕಳವು ಮಾಡಲಾಗಿದೆ. ಆಟಗಾರರು ದೆಹಲಿಗೆ ತೆರಳಿದ ನಂತರ ಬ್ಯಾಗ್ ಗಳು ಹೋಟೆಲ್ ಗೆ ತಲುಪಿವೆ.

ಬ್ಯಾಗ್ ಗಳನ್ನು ಪರಿಶೀಲಿಸಿದಾಗ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಕಳುವಾಗಿರುವುದು ಬೆಳಕಿಗೆ ಬಂದಿದ್ದು, ದೆಹಲಿ ಪ್ರಾಂಚೈಸಿ ವತಿಯಿಂದ ಪೊಲೀಸರಿಗೆ ದೂರು ನೀಡಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular