
ಶಿಗ್ಗಾಂವಿಗೆ ತೆರಳುವ ಮುನ್ನ ಬೆಂಗಳೂರಿನಲ್ಲಿ ಸುದ್ದಿಗಾರರೊದಿಗೆ ಮಾತನಾಡಿದ ನಟ ಕಿಚ್ಚ ಸುದೀಪ್, ಚುನಾವಣಾ ಪ್ರಚಾರ ನನಗೇನೂ ಹೊಸದಲ್ಲ, ಈ ಹಿಂದೆಯೂ ನನ್ನ ಸ್ನೇಹಿತರ ಪರವಾಗಿ ಪ್ರಚಾರ ಮಾಡಿದ್ದೆನು. ಶಿಗ್ಗಾವಿ ಕ್ಷೇತ್ರದಿಂದ ಚುನಾವಣಾ ಪ್ರಚಾರ ಮಾಡುತ್ತೇನೆ ಎಂದರು.
ಸಿಎಂ ಬೊಮ್ಮಾಯಿ ಅವರು ಹೇಳಿದ ಕಡೆ ನಾನು ಪ್ರಚಾರ ಮಾಡುತ್ತೇನೆ. ಪಾದಯಾತ್ರೆ, ರೋಡ್ ಶೋ ಎಲ್ಲವೂ ಇರುತ್ತೆ. ಮೇ 7ರವರೆಗೆ ಚುನಾವಣಾ ಪ್ರಚಾರ ಇರುತ್ತೆ ಎಂದಿದ್ದಾರೆ. ಬೇರೆ ಕಡೆಯಿಂದಲೂ ನನಗೆ ಚುನಾವಣ ಅಪ್ರಚಾರಕ್ಕೆ ಕೇಳಿದ್ದರು. ಪ್ರತಿ ಬಾರಿ ಕೇಳ್ತಾರೆ. ಅದರಂತೆ ಈ ಬಾರಿಯೂ ಕೇಳಿದ್ದಾರೆ ಎಂದು ಹೇಳಿದರು.

