HomeKarnatakaBIG NEWS: ಶೆಟ್ಟರ್ ರಾಜೀನಾಮೆಯಿಂದ ಆಘಾತವಾಗಿದೆ; ಬಹಿರಂಗ ಪತ್ರ ಬರೆದು ಉತ್ತರಿಸಲಿ ಎಂದ ಕೆ.ಎಸ್.ಈಶ್ವರಪ್ಪ

BIG NEWS: ಶೆಟ್ಟರ್ ರಾಜೀನಾಮೆಯಿಂದ ಆಘಾತವಾಗಿದೆ; ಬಹಿರಂಗ ಪತ್ರ ಬರೆದು ಉತ್ತರಿಸಲಿ ಎಂದ ಕೆ.ಎಸ್.ಈಶ್ವರಪ್ಪ

ಶಿವಮೊಗ್ಗ: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿ ತೊರೆದು ಕಾಂಗ್ರೆಸ್ ಗೆ ಸೇರ್ಪಡೆಯಾಗಿರುವುದು ಆಘಾತ ತಂದಿದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಮಾತನಾಡಿದ ಕೆ.ಎಸ್.ಈಶ್ವರಪ್ಪ. ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರಿದ್ದು ಸರಿಯಲ್ಲ. ಬಿಜೆಪಿಗೆ ಇಷ್ಟೆಲ್ಲ ಕೆಲಸಗಳನ್ನು ಮಾಡಿ ಈಗ ಕಾಂಗ್ರೆಸ್ ಗೆ ಯಾಕೆ ಸೇರ್ಪಡೆಯಾದ್ರಿ? ಬಿಜೆಪಿಯಲ್ಲಿದ್ದಾಗ ದೊಡ್ಡ ದೊಡ್ಡ ಭಾಷಣಗಳನ್ನು ಮಾಡಿ ನೀವೇ ಜಾರಿಗೆ ತಂದ ಬಿಲ್ ನ್ನು ವಾಪಸ್ ಪಡೆಯಲು ಕಾಂಗ್ರೆಸ್ ನಿಂದ ಬೆಂಬಲಿಸ್ತೀರಾ? ಎಂದು ಪ್ರಶ್ನಿಸಿದ್ದಾರೆ.

ಯಾಕೆ ಹೀಗೆ ಮಾಡಿದ್ರಿ? ಎಂದು ನಿಮ್ಮ ಮೊಮ್ಮಗ ಕೇಳಿದ್ರೆ ಏನು ಹೇಳ್ತೀರಿ? ನಿಮ್ಮ ಮೊಮ್ಮಗ ಕೂಡ ಛೀ, ಥೂ ಅಂತಾನೆ ಎಂದು ಕಿಡಿಕಾರಿದ್ದಾರೆ. ಅಲ್ಲದೇ ಜಗದೀಶ್ ಶೆಟ್ಟರ್ ಅವರಿಗೆ ನಾನು ಬಹಿರಂಗ ಪತ್ರವನ್ನು ಬರೆಯುತ್ತೇನೆ. ಅದಕ್ಕೆ ಅವರು ಉತ್ತರ ಕೊಡಲಿ. ನನ್ನ ಬಹಿರಂಗ ಪತ್ರದಿಂದ ಅವರಿಗೆ ನೋವಾಗಬಹುದು. ಅವರು ಬಿಜೆಪಿಗೆ ರಾಜೀನಾಮೆ ನೀಡಿದ್ದು ನನಗೂ ಆಘಾತವಾಗಿದೆ ಎಂದು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular