HomeEntertainmentಉರ್ಫಿ ತೊಡುವ ಬಟ್ಟೆ ವಿರೋಧಿಸಿ ಹತ್ಯೆ ಬೆದರಿಕೆ; ನಿರ್ದೇಶಕನ ಸಹಾಯಕನ ವಿರುದ್ಧ ಎಫ್ಐಆರ್

ಉರ್ಫಿ ತೊಡುವ ಬಟ್ಟೆ ವಿರೋಧಿಸಿ ಹತ್ಯೆ ಬೆದರಿಕೆ; ನಿರ್ದೇಶಕನ ಸಹಾಯಕನ ವಿರುದ್ಧ ಎಫ್ಐಆರ್

ವಿಲಕ್ಷಣ ಶೈಲಿಯ ಬಟ್ಟೆ ಧರಿಸುವ ಮೂಲಕ ಹೆಸರು ಪಡೆದಿರುವ ನಟಿ ಉರ್ಫಿ ಜಾವೇದ್ ಗೆ ಕೊಲೆ ಬೆದರಿಕೆ ಬಂದಿದ್ದು ನಟಿ ದೂರು ದಾಖಲಿಸಿದ್ದಾರೆ. ಈ ಬಾರಿ ಖ್ಯಾತ ನಿರ್ದೇಶಕ ನೀರಜ್ ಪಾಂಡೆ ಅವರ ಕಚೇರಿಯಿಂದ ಯಾರೋ ಒಬ್ಬರು ಕರೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾರೆಂದು ನಟಿ ಪೊಲೀಸ್ ಠಾಣೆಗೆ ಬಂದು ಎಫ್‌ಐಆರ್ ದಾಖಲಿಸಿದ್ದಾರೆ.

ಈ ಬಗ್ಗೆ ತನ್ನ ಇನ್ ಸ್ಟಾಗ್ರಾಂ ಖಾತೆಯಲ್ಲಿ ವಿಷಯ ಹಂಚಿಕೊಂಡಿರುವ ನಟಿ, ತಾನು ತುಂಬಾ ಅನಾರೋಗ್ಯದಿಂದ ಬಳಲುತ್ತಿದ್ದೇನೆ. ಆದಾಗ್ಯೂ ಅಂತಹ ಪರಿಸ್ಥಿತಿಯಲ್ಲಿಯೂ ನಾನು ನನ್ನ ವಿರುದ್ಧ ಕೊಲೆ ಬೆದರಿಕೆ ಹಾಕಿದವರ ಮೇಲೆ ಎಫ್‌ಐಆರ್ ದಾಖಲಿಸಲು ಪೊಲೀಸ್ ಠಾಣೆಗೆ ಹೋಗಬೇಕಾಯಿತು ಎಂದಿದ್ದಾರೆ. ನನಗೆ ಬೆದರಿಸಿದ ವ್ಯಕ್ತಿಗೆ ನನ್ನ ಕಾರ್ ನಂಬರ್ ಗೊತ್ತಿದೆ. ಆದ್ದರಿಂದ ನಾನು ಈ ಬಾರಿ ಕೇಸ್ ದಾಖಲಿಸಬೇಕಾಯಿತು ಎಂದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

“ಯಾರೋ ನನಗೆ ನೀರಜ್ ಪಾಂಡೆ ಅವರ ಕಚೇರಿಯಿಂದ ಕರೆ ಮಾಡಿದರು. ನಾನು ನೀರಜ್ ಪಾಂಡೆಯವರ ಸಹಾಯಕನೆಂದು ಹೇಳಿದ ಅವರು, ಸರ್ ನಿಮ್ಮನ್ನು ಪ್ರಾಜೆಕ್ಟ್ ಗಾಗಿ ಭೇಟಿಯಾಗಲು ಬಯಸುತ್ತಾರೆ ಎಂದು ಹೇಳಿದರು. ಹಾಗಾಗಿ ನಾನು ಭೇಟಿಯಾಗುವ ಮೊದಲು ಅವರು ಪ್ರಾಜೆಕ್ಟ್ ನ ಎಲ್ಲಾ ವಿವರಗಳನ್ನು ನನಗೆ ಕಳುಹಿಸಬೇಕು ಎಂದು ಹೇಳಿದ್ದೆ. ಈ ಸಮಯದಲ್ಲಿ ಆಪಾದಿತನ ಸಹಾಯಕನು ನೀರಜ್ ಪಾಂಡೆಯನ್ನು ಅಗೌರವಿಸಲು ನಿನಗೆಷ್ಟು ಧೈರ್ಯವಿದೆ ಎಂದು ಕೋಪಗೊಂಡು ನನ್ನನ್ನು ಕೊಲೆ ಮಾಡುವ ಬೆದರಿಕೆ ಹಾಕಿದ” ಎಂದು ಉರ್ಫಿ ಹೇಳಿದ್ದಾರೆ.

ಅವರು ನನ್ನ ಕಾರಿನ ಸಂಖ್ಯೆ ಮತ್ತು ಎಲ್ಲವನ್ನೂ ತಿಳಿದಿದ್ದಾರೆ ಮತ್ತು ನಾನು ಧರಿಸುವ ಬಟ್ಟೆಯ ಕಾರಣಕ್ಕಾಗಿ ನನ್ನನ್ನು ಹೊಡೆದು ಸಾಯಿಸಲು ಸಿದ್ಧರಿರುವುದಾಗಿ ಹೇಳಿದ್ದಾರೆ ಎಂದು ಉರ್ಫಿ ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular