HomeAstroಈ ರಾಶಿಯವರಿಗೆ ಇಂದು ಶುಭ ದಿನ

ಈ ರಾಶಿಯವರಿಗೆ ಇಂದು ಶುಭ ದಿನ

ಮೇಷ ರಾಶಿ

ಇಂದು ಮಿತ್ರರೊಂದಿಗೆ ಮೋಜು ಮಸ್ತಿಯಲ್ಲಿ ತೊಡಗಲಿದ್ದೀರಿ. ಮಿತ್ರರಿಂದ ಉಪಹಾರ ಸಿಗಲಿದೆ. ಹಣ ಖರ್ಚಾಗಬಹುದು. ಹೊಸ ಸ್ನೇಹದಿಂದ ಭವಿಷ್ಯದಲ್ಲಿ ಲಾಭವಾಗಲಿದೆ.

ವೃಷಭ ರಾಶಿ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇಂದು ಉದ್ಯೋಗಿಗಳಿಗೆ ಶುಭ ದಿನ. ಹೊಸ ಕಾರ್ಯವನ್ನು ಯಶಸ್ವಿಯಾಗಿ ಆಯೋಜಿಸಲಿದ್ದೀರಿ. ಯಾರೊಂದಿಗೂ ಜಗಳವಾಗದಂತೆ ಎಚ್ಚರ ವಹಿಸಿ. ಸರ್ಕಾರಿ ಕ್ಷೇತ್ರದಲ್ಲಿ ಲಾಭವಾಗಲಿದೆ.

ಮಿಥುನ ರಾಶಿ

ಇಂದು ಯಾವುದೇ ಹೊಸ ಕಾರ್ಯವನ್ನು ಆರಂಭಿಸಲು ದಿನ ಅನುಕೂಲಕರವಾಗಿಲ್ಲ. ಆರೋಗ್ಯ ಕೊಂಚ ಏರುಪೇರಾಗಬಹುದು. ಮಾನಸಿಕವಾಗಿ ಶಾಂತಿ ಪ್ರಾಪ್ತಿಯಾಗಲಿದೆ.

ಕರ್ಕ ರಾಶಿ

ಇಂದು ಪ್ರತಿ ವಿಷಯದಲ್ಲೂ ಸಮಾಧಾನದಿಂದ ವ್ಯವಹರಿಸಿ. ಮನೆ ಮತ್ತು ಕಚೇರಿಯಲ್ಲಿ ಸಂತೋಷದ ವಾತಾವರಣವಿರುತ್ತದೆ. ಇಂದು ನಿಮಗೆ ಶುಭ ದಿನ. ಮಾತಿನ ಬಲದಿಂದ್ಲೇ  ಕೆಲಸಗಳು ಯಶಸ್ವಿಯಾಗುತ್ತವೆ.

ಸಿಂಹ ರಾಶಿ

ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು, ಪತಿ ಪತ್ನಿ ಮಧ್ಯೆ ಭಿನ್ನಾಭಿಪ್ರಾಯ ಮೂಡಬಹುದು. ಸಂಗಾತಿಯ ಆರೋಗ್ಯ ಹದಗೆಡಬಹುದು. ಮಿತ್ರರಿಂದ ಸುಖ ಪ್ರಾಪ್ತಿಯಾಗಲಿದೆ.

ಕನ್ಯಾ ರಾಶಿ

ಇಂದು ಸ್ಪೂರ್ತಿಯ ಅನುಭವವಾಗುತ್ತದೆ. ಕುಟುಂಬ ಸದಸ್ಯರೊಂದಿಗೆ ವಾದ-ವಿವಾದ ಮಾಡಬೇಡಿ. ಸಹೋದ್ಯೋಗಿಗಳ ಸಹಕಾರ ಸಿಗುತ್ತದೆ. ಅನಾವಶ್ಯಕ ಖರ್ಚು ಹೆಚ್ಚಾಗಲಿದೆ.

ತುಲಾ ರಾಶಿ

ಇಂದು ಮಿಶ್ರಫಲವಿದೆ. ಆಯಾಸ, ಆಲಸ್ಯ ಮತ್ತು ಚಿಂತೆಯ ಅನುಭವವಾಗಲಿದೆ. ವ್ಯವಹಾರದಲ್ಲಿ ತೊಂದರೆ ಎದುರಾಗಬಹುದು. ಮಕ್ಕಳೊಂದಿಗೆ ಭಿನ್ನಾಭಿಪ್ರಾಯ ಉಂಟಾಗಬಹುದು.

ವೃಶ್ಚಿಕ ರಾಶಿ

ವ್ಯಾವಹಾರಿಕ ಕ್ಷೇತ್ರದಲ್ಲಿ ಪ್ರಶಂಸೆ ಸಿಗಲಿದೆ. ಎಲ್ಲಾ ಕಾರ್ಯಗಳು ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ. ಗೃಹಸ್ಥ ಜೀವನ ಮಧುರವಾಗಿರುತ್ತದೆ. ಮಧ್ಯಾಹ್ನದ ನಂತರ ಮಿತ್ರರಿಂದ ಲಾಭವಾಗುತ್ತದೆ.

ಧನು ರಾಶಿ

ಹೊಸ ಕಾರ್ಯ ಆರಂಭಿಸಲು ಇಂದು ಶುಭ ದಿನ. ಸಹೋದರರು, ಸಂಬಂಧಿಕರನ್ನು ಭೇಟಿಯಾಗಲಿದ್ದೀರಿ. ಆರೋಗ್ಯ ಉತ್ತಮವಾಗಿರುತ್ತದೆ. ಭಾಗ್ಯವೃದ್ಧಿಯ ಸಾಧ್ಯತೆ ಇದೆ.

ಮಕರ ರಾಶಿ

ಕುಟುಂಬದವರೊಂದಿಗೆ ಕಲಹವಾಗದಂತೆ ಎಚ್ಚರ ವಹಿಸಿ. ಮಾನಸಿಕ ಮತ್ತು ದೈಹಿಕ ಶ್ರಮ ಹೆಚ್ಚಾಗಿರುತ್ತದೆ. ಆಕಸ್ಮಿಕ ಧನಲಾಭವಾಗಲಿದೆ. ಬಾಕಿ ಇರುವ ಹಣ ವಸೂಲಾಗಲಿದೆ.

ಕುಂಭ ರಾಶಿ

ಇಂದು ನಿಮಗೆ ಶುಭ ದಿನ. ಶಾರೀರಿಕ ಮತ್ತು ಮಾನಸಿಕವಾಗಿ ಪ್ರಸನ್ನವಾಗಿರುತ್ತೀರಾ. ವಿದ್ಯಾರ್ಥಿಗಳಿಗೆ ಉತ್ತಮ ದಿನ. ಓದಿನಲ್ಲಿ ಉತ್ತಮ ಪ್ರದರ್ಶನ ತೋರಲಿದ್ದೀರಿ.

ಮೀನ ರಾಶಿ

ಲಾಭ ಮತ್ತು ಲಾಲಸೆಯಿಂದ ದೂರವಿರಿ. ಆರ್ಥಿಕ ವಿಷಯದಲ್ಲಿ ಎಚ್ಚರವಿರಲಿ. ಕೆಲಸದ ಯಶಸ್ಸಿಗೆ ಇಂದು ಶುಭ ದಿನ. ಮನೆಯವರೊಂದಿಗೆ ಆನಂದವಾಗಿ ಸಮಯ ಕಳೆಯಲಿದ್ದೀರಿ.

For Latest News Updates, Join Our Whatsapp Community🚩
RELATED ARTICLES

Most Popular