ಪ್ರಯಾಣಿಕರ ಬಸ್ ನಲ್ಲಿ ಸಾಗಿಸ್ತಿದ್ದ ಜಿಲೆಟಿನ್ ಮತ್ತು ಡಿಟೋನೇಟರ್ ಸೇರಿದಂತೆ ಬೃಹತ್ ಪ್ರಮಾಣದ ಸ್ಫೋಟಕ ವಸ್ತುಗಳನ್ನು ಅಸ್ಸಾಂ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಗೋಲ್‌ಪಾರಾ ಜಿಲ್ಲೆಯಲ್ಲಿ ಪ್ರಯಾಣಿಕರ ಬಸ್‌ನಿಂದ ಸ್ಫೋಟಕ ವಸ್ತುಗಳ ಜೊತೆ ಇಬ್ಬರನ್ನ ಬಂಧಿಸಲಾಗಿದೆ.
ಪ್ರಯಾಣಿಕರ ಬಸ್‌ನಲ್ಲಿ ಅಪಾರ ಪ್ರಮಾಣದ ಸ್ಫೋಟಕಗಳನ್ನು ಸಾಗಿಸುತ್ತಿರುವ ಬಗ್ಗೆ ಪೊಲೀಸರಿಗೆ ಗುಪ್ತಚರ ಮಾಹಿತಿ ಸಿಕ್ಕಿತ್ತು. ಮಾಹಿತಿಯ ಆಧಾರದ ಮೇಲೆ ಗೋಲ್ ಪಾರಾ ಜಿಲ್ಲೆಯ ಪೊಲೀಸ್ ತಂಡ ಮತ್ತು ಕೃಷ್ಣಾಯ್ ಪೊಲೀಸ್ ಠಾಣೆ ತಂಡ ಜಂಟಿ ಕಾರ್ಯಾಚರಣೆ ನಡೆಸಿತು.
ಎಎಸ್-25 ಎಸಿ-5475 ನೋಂದಣಿ ಸಂಖ್ಯೆ ಹೊಂದಿರುವ ಪ್ರಯಾಣಿಕರ ಬಸ್ ಅನ್ನು ಕೃಷ್ಣಾಯ್ ಪ್ರದೇಶದಲ್ಲಿ ಪೊಲೀಸರು ತಡೆದು ಬಸ್‌ನಿಂದ 1162 ಸಂಖ್ಯೆಯ ಜೆಲಾಟಿನ್ ಮತ್ತು 998 ಡಿಟೋನೇಟರ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಬಸ್ ಮೇಘಾಲಯದಿಂದ ಬರುತ್ತಿತ್ತು. ಈ ಬಗ್ಗೆ ವಿವರವಾದ ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಗೋಲ್‌ಪಾರಾ ಎಎಸ್‌ಪಿ, ರಿತುರಾಜ್ ಡೋಲಿ ತಿಳಿಸಿದ್ದಾರೆ.
https://twitter.com/ANI/status/1647532643540668416?ref_src=twsrc%5Etfw%7Ctwcamp%5Etweetembed%7Ctwterm%5E1647532643540668416%7Ctwgr%5E9fbbc2c42ba5a998424095599c65be26e4f7e66e%7Ctwcon%5Es1_&ref_url=http%3A%2F%2Fm.dailyhunt.in%2Fnews%2Findia%2Fenglish%2Ftimesnownews-epaper-dhf729babb066e4159bc8e6ad4fc8cd3b9%2Fassampolicerecovershugecacheofexplosivesgelatindetonatorsfrompassengerbusingopalparadistrictwatch-newsid-n490687588