ಜಗತ್ತಿನಲ್ಲಿ ತಾಯಿಯ ಕಾಳಜಿಗಿಂತ ಪ್ರಬಲವಾದ ವಿಚಾರ ಮತ್ತೊಂದಿಲ್ಲ. ಆನೆಯೊಂದು ಮೊಸಳೆ ಬಾಯಿಯಿಂದ ತನ್ನ ಮರಿಯನ್ನು ರಕ್ಷಿಸಲು ಧೈರ್ಯವಾಗಿ ಹೋರಾಡಿದ ವಿಡಿಯೋವೊಂದು ವೈರಲ್ ಆಗಿದೆ
ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಅಧಿಕಾರಿ ಸುಪ್ರಿಯಾ ಸಾಹು ಶೇರ್ ಮಾಡಿರುವ ಈ ವಿಡಿಯೋದಲ್ಲಿ ಸಣ್ಣದೊಂದು ಕೊಳದಲ್ಲಿ ನೀರು ಕುಡಿಯುತ್ತಿರುವ ಆನೆ ಹಾಗೂ ಅದರ ಮರಿಯನ್ನು ನೋಡಬಹುದಾಗಿದೆ.
ನೋಡ ನೋಡುತ್ತಲೇ ದೊಡ್ಡದೊಂದು ಮೊಸಳೆ ನೀರಿನಲ್ಲಿ ಹೊಂಚು ಹಾಕಿ ಕುಳಿತು ಮರಿ ಆನೆ ಮೇಲೆ ಭಯಂಕರವಾಗಿ ಎರಗಲು ಸಜ್ಜಾಗಿದೆ. ಇದನ್ನು ಗ್ರಹಿಸಿದ ಕೂಡಲೇ ಮೊಸಳೆ ಮೇಲೆ ದಾಳಿಗೆರಗಿದ ಆನೆ, ಮೊಸಳೆಯನ್ನು ಕೊಳ ಬಿಟ್ಟು ಓಡಿ ಹೋಗುವಂತೆ ಮಾಡಿದೆ.
ತನ್ನೆಲ್ಲಾ ಚುರುಕುತನ ಹಾಗೂ ಶಕ್ತಿಯನ್ನು ಬಿಟ್ಟು ಮೊಸಳೆಗೆ ಅಳುಕು ಮುಟ್ಟಿಸಿದ ಆನೆ ಈ ವೇಳೆ ರೊಷದಿಂದ ಘೀಳಿಡುತ್ತಿರುವುದನ್ನು ವಿಡಿಯೋದಲ್ಲಿ ಕೇಳಬಹುದಾಗಿದೆ.