HomeKarnatakaಪ್ರತಿಷ್ಠಿತ ಬ್ರಾಂಡ್ ನಕಲು ಮಾಡಿದ್ದ ಉದ್ಯಮಿ ಅರೆಸ್ಟ್: ಏಷ್ಯನ್ ಪೇಂಟ್ ನಕಲಿ ಮಾಲು ವಶಕ್ಕೆ

ಪ್ರತಿಷ್ಠಿತ ಬ್ರಾಂಡ್ ನಕಲು ಮಾಡಿದ್ದ ಉದ್ಯಮಿ ಅರೆಸ್ಟ್: ಏಷ್ಯನ್ ಪೇಂಟ್ ನಕಲಿ ಮಾಲು ವಶಕ್ಕೆ

ಬೆಂಗಳೂರು: ಪ್ರತಿಷ್ಠಿತ ಬ್ರಾಂಡ್ ನಕಲು ಮಾಡಿದ್ದ ಉದ್ಯಮಿಯನ್ನು ಬಂಧಿಸಲಾಗಿದೆ. ರಾಜಸ್ಥಾನ ಮೂಲದ ಕಿನ್ನಿಲಾಲ್ ಬಂಧಿತ ಆರೋಪಿ

ಬೆಂಗಳೂರಿನ ವಿವಿ ಪುರಂ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ರಾಜಸ್ಥಾನ ಮೂಲದ ಕಿನ್ನಿಲಾಲ್ ಬಂಧಿಸಿದ್ದಾರೆ. 10 ವರ್ಷಗಳಿಂದ ಪ್ರತಿಷ್ಠಿತ ಏಷ್ಯನ್ ಪೇಂಟ್ಸ್ ನಕಲಿ ಮಾಲು ಮಾರಾಟ ಮಾಡಿದ್ದ ಹಿನ್ನೆಲೆಯಲ್ಲಿ ಕಿನ್ನಿಲಾಲ್ ನನ್ನು ಬಂಧಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೊದಲಿಗೆ ತನ್ನದೇ ಲೋಕಲ್ ಬ್ರಾಂಡ್ ನಲ್ಲಿ ವ್ಯವಹಾರ ಆರಂಭಿಸಿದ್ದ ಕಿನ್ನಿಲಾಲ್ ಬ್ಯುಸಿನೆಸ್ ಯಶಸ್ವಿ ಕಾಣದ ಹಿನ್ನೆಲೆಯಲ್ಲಿ ಪ್ರತಿಷ್ಠಿತ ಏಷ್ಯನ್ ಪೇಂಟ್ ನಕಲು ಮಾಡಿ ಡಿಸ್ಟ್ರಿಬ್ಯೂಟ್ ಮಾಡುತ್ತಿದ್ದ. ಏಷ್ಯನ್ ಕಂಪನಿ ಹೆಸರಲ್ಲಿ ನಕಲಿ ಪೇಂಟಿಂಗ್ ಮಾರಾಟ ಪತ್ತೆಯಾಗಿತ್ತು.

ದೂರು ಹಿನ್ನೆಲೆಯಲ್ಲಿ ಮೊದಲಿಗೆ ಸ್ಯಾಂಪಲ್ ಪಡೆದು ಪರಿಶೀಲನೆ ನಡೆಸಲಾಗಿತ್ತು. ಪರಿಶೀಲನೆ ವೇಳೆಯಲ್ಲಿ ನಕಲಿ ಪೇಟಿಂಗ್ ಮಾರಾಟ ಮಾಡುತ್ತಿರುವುದು ಪತ್ತೆಯಾಗಿದ್ದು, ವಿದ್ಯಾರಣ್ಯಪುರ ಕಛೇರಿ ಮೇಲೆ ಪೊಲೀಸರು ದಾಳಿ ಮಾಡಿದ್ದರು. ದಾಳಿಯ ವೇಳೆ 10 ಲಕ್ಷ ರೂಪಾಯಿ ಮೌಲ್ಯದ ಪೇಂಟ್ ವಶಕ್ಕೆ ಪಡೆಯಲಾಗಿತ್ತು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular