HomeInternationalಹುಟ್ಟುಹಬ್ಬದಂದೇ ಕೋಟ್ಯಾಧಿಪತಿಯಾದ ಯುವಕ; ಉಡುಗೊರೆಯಾಗಿ ಬಂದ ಲಾಟರಿಯಲ್ಲಿತ್ತು ಅದೃಷ್ಟ...!

ಹುಟ್ಟುಹಬ್ಬದಂದೇ ಕೋಟ್ಯಾಧಿಪತಿಯಾದ ಯುವಕ; ಉಡುಗೊರೆಯಾಗಿ ಬಂದ ಲಾಟರಿಯಲ್ಲಿತ್ತು ಅದೃಷ್ಟ…!

18 ನೇ ವರ್ಷದ ಹುಟ್ಟುಹಬ್ಬಕ್ಕೆ ಸಿಕ್ಕ ಲಾಟರಿ ಟಿಕೆಟ್ ನಲ್ಲಿ ಯವಕ 8.2 ಕೋಟಿ ರೂಪಾಯಿ ಗೆದ್ದಿದ್ದಾನೆ. ಈ ಮೂಲಕ ಅಮೆರಿಕಾ ಮೂಲದ ಯುವಕನ 18ನೇ ಹುಟ್ಟುಹಬ್ಬ ತುಂಬಾ ವಿಶೇಷವಾಗಿದೆ.

ಲಾಟರಿ ಸ್ಪರ್ಧೆಯಲ್ಲಿ ಭಾಗವಹಿಸಲು ಕಾನೂನುಬದ್ಧ ವಯಸ್ಸನ್ನು ತಲುಪಿದ ಹದಿಹರೆಯದ ಕಾಲೇಬ್ ಹ್ಯಾಂಗ್ ಎಂಬ ಯುವಕನಿಗೆ ಉಡುಗೊರೆಯಾಗಿ ಸಿಕ್ಕ ಲಾಟರಿಯಿಂದ 8.2 ಕೋಟಿ ರೂಪಾಯಿ ಸಿಕ್ಕಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕ್ಯಾಲಿಫೋರ್ನಿಯಾ ಲಾಟರಿ ಪ್ರಕಾರ, ಕಾಲೇಬ್ ಲಾಟರಿ ಟಿಕೆಟ್ ಖರೀದಿಸಿರಲಿಲ್ಲ. ಆತನ 18 ನೇ ಹುಟ್ಟುಹಬ್ಬಕ್ಕೆ ಯುವಕನ ಅಜ್ಜಿ ಲಾಟರಿ ಟಿಕೆಟ್ ನ ಉಡುಗೊರೆಯಾಗಿ ನೀಡಿದ್ದರು.

ನಾನು ತುಂಬಾ ಉತ್ಸುಕನಾಗಿದ್ದೇನೆ ! ನಾನು ಖಂಡಿತವಾಗಿಯೂ ಅದನ್ನು ನಿರೀಕ್ಷಿಸಿರಲಿಲ್ಲ, ಎಂದು 8 ಕೋಟಿ ಗೆದ್ದ ಕಲೇಬ್ ಹೇಳಿದ್ದಾರೆ.

ಯುವಕ ಮತ್ತು ಅವನ ತಾಯಿ ಮೀನುಗಾರಿಕೆಗೆ ತೆರಳುತ್ತಿದ್ದಾಗ ಟಿಕೆಟ್ ಗೀಚಿದಾಗ ದೊಡ್ಡ ಗೆಲುವಿನ ಅರಿವಾಯಿತು.

ನನ್ನ ಬಳಿ ಇನ್ನೂ ಗುರುತಿನ ಚೀಟಿ ಇರಲಿಲ್ಲ. ಟಿಕೆಟ್ ಕ್ಲೇಮ್ ಮಾಡುವ ಮೊದಲು ಐಡಿ ಪಡೆಯಬೇಕಾಗಿದ್ದರಿಂದ ಮೀನುಗಾರಿಕೆಗೆ ತೆರಳುತ್ತಿದ್ದ ನಾವು ತಿರುಗಿ ಮನೆಗೆ ಹೋದೆವು ಎಂದು ಕಾಲೇಬ್ ಹೇಳಿದರು. ಲಾಟರಿಯಿಂದ ಬಂದ ಹಣವನ್ನು ತನ್ನ ಕಾಲೇಜು ಬಾಕಿಯನ್ನು ಪಾವತಿಸಲು ಮತ್ತು ತನ್ನ ಭವಿಷ್ಯದಲ್ಲಿ ಹೂಡಿಕೆ ಮಾಡಲು ಬಳಸುವುದಾಗಿ ಕಾಲೇಬ್ ಬಹಿರಂಗಪಡಿಸಿದರು.

For Latest News Updates, Join Our Whatsapp Community🚩
RELATED ARTICLES

Most Popular