HomeInternationalಪ್ರೀವೆಡ್ಡಿಂಗ್, ಪೋಸ್ಟ್ ವೆಡ್ಡಿಂಗ್ ಓಲ್ಡ್ ಸ್ಟೈಲ್; ಟ್ರೆಂಡಿಂಗ್ ಆಯ್ತು ಡಿವೋರ್ಸ್ ಫೋಟೋ ಶೂಟ್, ಮದುವೆ ಬಟ್ಟೆಗೆ...

ಪ್ರೀವೆಡ್ಡಿಂಗ್, ಪೋಸ್ಟ್ ವೆಡ್ಡಿಂಗ್ ಓಲ್ಡ್ ಸ್ಟೈಲ್; ಟ್ರೆಂಡಿಂಗ್ ಆಯ್ತು ಡಿವೋರ್ಸ್ ಫೋಟೋ ಶೂಟ್, ಮದುವೆ ಬಟ್ಟೆಗೆ ಬೆಂಕಿ, ಫೋಟೋ ಪೀಸ್ ಪೀಸ್

ಪ್ರೀ ವೆಡ್ಡಿಂಗ್, ಪೋಸ್ಟ್ ವೆಡ್ಡಿಂಗ್, ಬೇಬಿ ಶೋವರ್, ಬೇಬಿ ಫೋಟೋ ಶೂಟ್ ಟ್ರೆಂಡ್ ನ ಪಕ್ಕಕ್ಕೆ ಸರಿಸಿ ಇದೀಗ ಡಿವೋರ್ಸ್ ಫೋಟೋಶೂಟ್ ಮುನ್ನೆಲೆಗೆ ಬರ್ತಿದೆ. ‘ವಿಚ್ಛೇದನ ಫೋಟೋಶೂಟ್’ ಇತ್ತೀಚಿನ ಟ್ರೆಂಡ್ ಆಗಿದೆ. ದಾಂಪತ್ಯ ಜೀವನದಿಂದ ದೂರವಾದ ಬಳಿಕ ವಿಚ್ಛೇದನವನ್ನು ಆಚರಿಸುತ್ತಿರುವ ಮಹಿಳೆಯ ಫೋಟೋಶೂಟ್‌ನ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.

“ಈ ಮಹಿಳೆಯ ವಿಚ್ಛೇದನದ ಫೋಟೋಶೂಟ್‌ನಿಂದ ಸೆರೆಹಿಡಿಯಲಾದ ಬೆಲೆಬಾಳುವ ಫೋಟೋಗಳು” ಎಂಬ ಶೀರ್ಷಿಕೆಯೊಂದಿಗೆ ಫೋಟೋಗಳನ್ನು ಪೋಸ್ಟ್ ಮಾಡಲಾಗಿದೆ. ಈ ಪೋಸ್ಟ್ 5 ಲಕ್ಷಕ್ಕೂ ಹೆಚ್ಚು ಲೈಕ್‌ಗಳನ್ನು ಸಂಗ್ರಹಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಫೋಟೋಶೂಟ್ ಚಿತ್ರಗಳಲ್ಲಿ, ಲಾರೆನ್ ಬ್ರೂಕ್ ಎಂಬ ಮಹಿಳೆ ಬೆರಗುಗೊಳಿಸುವ ಕೆಂಪು ಉಡುಪಿನಲ್ಲಿ ಪೋಸ್ ನೀಡಿದ್ದಾರೆ. ಆಕೆ ಡಿವೋರ್ಸ್ಡ್ ಎಂಬ ಫಲಕ ಹಿಡಿದು ನಗುತ್ತಾ ಪೋಸ್ ನೀಡಿದ್ದಾರೆ. ಫೋಟೋಶೂಟ್ ಚಿತ್ರಗಳಲ್ಲಿ ತನ್ನ ಮದುವೆಯ ಬಟ್ಟೆಯನ್ನು ಬೆಂಕಿಗೆ ಹಾಕುವುದು, ಮದುವೆಯ ಫೋಟೋ ಫ್ರೇಮ್ ಅನ್ನು ತನ್ನ ಹಿಮ್ಮಡಿಗಳಿಂದ ಒಡೆದು ಹಾಕುವುದು, ತನ್ನ ವಿವಾಹದ ಚಿತ್ರವನ್ನು ಹರಿದು ಹಾಕುವುದು ಸೇರಿದಂತೆ ಅನೇಕ ಚಿತ್ರಗಳಿವೆ.

ಈ ಹೊಸ ಟ್ರೆಂಡ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular