ಉಪೇಂದ್ರ, ಕಿಚ್ಚ ಸುದೀಪ್ ಮತ್ತು ಶ್ರಿಯಾ ಸರಣ್ ನಟನೆಯ ಕನ್ನಡ ಆಕ್ಷನ್ ಡ್ರಾಮಾ ಕಬ್ಜ ಜಾಗತಿಕ ಸ್ಟ್ರೀಮಿಂಗ್ ಪ್ರೀಮಿಯರ್ ಅನ್ನು ಪ್ರೈಮ್ ವೀಡಿಯೋ ಘೋಷಿಸಿದೆ.
ಆರ್. ಚಂದ್ರು ನಿರ್ದೇಶಿಸಿದ ನಿರ್ಮಾಣ ಮಾಡಿದ ಮತ್ತು ಆನಂದ ಪಂಡಿತ್ ಸಹ ನಿರ್ಮಾಣದ ಸಿನಿಮಾದಲ್ಲಿ ವಿಶಿಷ್ಟವಾಗಿ ಶಿವರಾಜ್ಕುಮಾರ್ ಕೂಡ ಕಾಣಿಸಿಕೊಂಡಿದ್ದಾರೆ.
ಇದರ ಹಿನ್ನೆಲೆ ಸಂಗೀತವನ್ನು ರವಿ ಬಸ್ರೂರು ನೀಡಿದ್ದಾರೆ. ಭಾರತ ಮತ್ತು 240 ಕ್ಕೂ ಹೆಚ್ಚು ದೇಶಗಳು ಮತ್ತು ಪ್ರದೇಶಗಳಲ್ಲಿ ಪ್ರೈಮ್ ಸದಸ್ಯರು ಏಪ್ರಿಲ್ 14 ರಿಂದ ಸಿನಿಮಾವನ್ನು ಕನ್ನಡದಲ್ಲಿ ವೀಕ್ಷಿಸಬಹುದು. ಅಲ್ಲದೆ,
ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿಯಲ್ಲೂ ಡಬ್ ಆಗಿರುವ ಸಿನಿಮಾವನ್ನು ವೀಕ್ಷಿಸಬಹುದು.
ಭಾರತದ ಸ್ವಾತಂತ್ರ್ಯಕ್ಕೂ ಮೊದಲು 1942 ರಲ್ಲಿ ಶುರುವಾಗುವ ಕಬ್ಜ, ಒಬ್ಬ ಸಾಮಾನ್ಯ ವ್ಯಕ್ತಿಯು ಪರಿಸ್ಥಿತಿಗಳಿಂದಾಗಿ ಅತ್ಯಂತ ಅಪಾಯಕಾರಿ ಗ್ಯಾಂಗ್ಸ್ಟಾರ್ ಆಗಿ ಬೆಳೆಯುವ ಕಥೆಯನ್ನು ಹೇಳುತ್ತದೆ.
ಸ್ವಾತಂತ್ರ್ಯ ಹೋರಾಟಗಾರನ ಪುತ್ರ ಅರ್ಕೇಶ್ವರ (ಉಪೇಂದ್ರ), ಹಿಂಸಾಚಾರದಲ್ಲಿ ತನ್ನ ಅಣ್ಣನನ್ನು ಕಳೆದುಕೊಂಡಿರುತ್ತಾನೆ ಮತ್ತು ಪ್ರಸ್ತುತ ಹಾಗೂ ಹಿಂದಿನ ಘಟನೆಗಳಿಂದಾಗಿ ತೀವ್ರ ಪ್ರಕ್ಷುಬ್ಧಗೊಂಡಿರುತ್ತಾನೆ.
ಕುಟುಂಬದಲ್ಲಿ ಆದ ಆಘಾತವು ಅವನೊಳಗೆ ಒಂದು ಕಿಚ್ಚನ್ನು ಹುಟ್ಟಿಸುತ್ತದೆ. ಸೇಡಿಗಾಗಿ ಹಾತೊರೆಯುತ್ತಾನೆ. ಇದರಿಂದಾಗಿ ಆತ ಅಂಡರ್ವರ್ಲ್ಡ್ ಡಾನ್ ಆಗಿ ಬೆಳೆಯುತ್ತಾನೆ.