HomeKarnatakaBIG NEWS: ಸಚಿವ ಸೋಮಣ್ಣಗೂ ಶಾಕ್ ನೀಡುತ್ತಾ ಹೈಕಮಾಂಡ್ ?

BIG NEWS: ಸಚಿವ ಸೋಮಣ್ಣಗೂ ಶಾಕ್ ನೀಡುತ್ತಾ ಹೈಕಮಾಂಡ್ ?

ಬೆಂಗಳೂರು: ವಿಧಾನಸಭಾ ಚುನಾವಣೆ ಹೊತ್ತಲ್ಲೇ ಬಿಜೆಪಿ ಹೈಕಮಾಂಡ್ ರಾಜ್ಯ ಬಿಜೆಪಿ ಹಿರಿಯ ನಾಯಕರಿಗೆ ಶಾಕ್ ನೀಡುವ ಸಾಧ್ಯತೆ ದಟ್ಟವಾಗಿದೆ. ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಸ್ವ ಇಚ್ಛೆಯಿಂದ ರಾಜಕೀಯ ನಿವೃತ್ತಿ ಘೋಷಣೆ ಬೆನ್ನಲ್ಲೇ ಸಚಿವ ವಿ. ಸೋಮಣ್ಣಗೂ ಪರೋಕ್ಷ ಸಂದೇಶ ರವಾನೆಯಾಗಿದೆ ಎನ್ನಲಾಗುತ್ತಿದೆ.

ಮಗನಿಗೆ ಟಿಕೆಟ್ ನೀಡುವಂತೆ ವರಿಷ್ಠರ ಬಳಿ ಪಟ್ಟು ಹಿಡಿದಿರುವ ಸಚಿವ ಸೋಮಣ್ಣಗೆ ಆಯ್ಕೆ ನಿಮ್ಮದು ಎಂಬ ಸಂದೇಶ ರವಾನಿಸಿದೆ. ಕುಟುಂಬದಲ್ಲಿ ಇಬ್ಬರಿಗೆ ಬಿಜೆಪಿ ಟಿಕೆಟ್ ನೀಡಲು ಸಾಧ್ಯವಿಲ್ಲ, ಮಗನಿಗೆ ಟಿಕೆಟ್ ಬೇಕಾದರೆ ನೀವು ನಿವೃತ್ತಿ ಘೋಷಿಸಿ. ಇಲ್ಲವೇ ನೀವೇ ಚುನಾವಣೆಗೆ ಸ್ಪರ್ಧಿಸುತ್ತೀರಿ ಎಂದಾದರೆ ಯಾವುದೇ ತೊಂದರೆಯಿಲ್ಲ ಎಂದು ಸೂಕ್ಷ್ಮವಾಗಿ ತಿಳಿಸಿದೆ ಎಂದು ಹೇಳಲಾಗುತ್ತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಹಿನ್ನೆಲೆಯಲ್ಲಿ ವಿ. ಸೋಮಣ್ಣ ಇಕ್ಕಟ್ಟಿಗೆ ಸಿಲುಕಿದ್ದು, ಪುತ್ರನಿಗಾಗಿ ರಾಜಕೀಯ ತ್ಯಾಗಕ್ಕೆ ಸೋಮಣ್ಣ ಮುಂದಾಗುತ್ತಾರಾ? ಎಂಬ ಪ್ರಶ್ನೆ ಮೂಡಿದೆ. ಒಟ್ಟಾರೆ ಚುನಾವಣೆ ಹೊತ್ತಲ್ಲೇ ರಾಜ್ಯ ಬಿಜೆಪಿಯ 70 ವರ್ಷ ಮೇಲ್ಪಟ್ಟ ಇನ್ನಷ್ಟು ನಾಯಕರಿಗೆ ಹೈಕಮಾಂಡ್ ಶಾಕ್ ನೀಡಿದರೂ ಅಚ್ಚರಿ ಇಲ್ಲ ಎನ್ನಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular