HomeKarnatakaBIG NEWS: ದೇವೇಗೌಡರು ಏನ್ ಹೇಳ್ತಾರೋ ಅದೇ ಫೈನಲ್; HDK ಗೆ ಪರೋಕ್ಷ ಟಾಂಗ್ ನೀಡಿದ...

BIG NEWS: ದೇವೇಗೌಡರು ಏನ್ ಹೇಳ್ತಾರೋ ಅದೇ ಫೈನಲ್; HDK ಗೆ ಪರೋಕ್ಷ ಟಾಂಗ್ ನೀಡಿದ ಹೆಚ್.ಡಿ. ರೇವಣ್ಣ

ಹಾಸನ: ಹಾಸನ ಜೆಡಿಎಸ್ ಟಿಕೆಟ್ ವಿಚಾರವಾಗಿ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರೇ ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಹೇಳುವ ಮೂಲಕ ಮಾಜಿ ಸಚಿವ ಹೆಚ್.ಡಿ. ರೇವಣ್ಣ, ಮಾಜಿ ಸಿಎಂ ಕುಮಾರಸ್ವಾಮಿಗೆ ಟಾಂಗ್ ನೀಡಿದ್ದಾರೆ.

ಹಾಸನ ಜಿಲ್ಲೆಯ ಆನೆಕೆರೆಯಮ್ಮ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್.ಡಿ. ರೇವಣ್ಣ, ಹೆಚ್ ಡಿ ಕೆ ಆಗಲಿ ಯಾರೇ ಆಗಲಿ ಯಾರ ಹೇಳಿಕೆಗೂ ನಾನು ಪ್ರತಿಕ್ರಿಯೆ ನೀಡಲ್ಲ. ಹಾಸನ ಅಭ್ಯರ್ಥಿ ವಿಚಾರದಲ್ಲಿ ದೇವೇಗೌಡರು ಏನು ಹೇಳ್ತಾರೋ ಅದೇ ಅಂತಿಮ. ದೇವೇಗೌಡರಿಗೆ 60 ವರ್ಷಗಳ ರಾಜಕೀಯ ಅನುಭವಿದೆ. ಸಾಮಾನ್ಯ ಕಾರ್ಯಕರ್ತ ಯಾರು ಎಂಬುದೂ ದೇವೇಗೌಡರಿಗೆ ಗೊತ್ತು ಎಂದು ಹೇಳಿದರು.

ಹಾಸನ ಟಿಕೆಟ್ ಬಗ್ಗೆ ದೇವೇಗೌಡರು ಚರ್ಚೆ ನಡೆಸಿದ್ದಾರೆ. ದೇವೇಗೌಡರ ಮಾತೆ ಅಂತಿಮ. ಅವರು ಕೈಗೊಳ್ಳುವ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಾಗಿರುತ್ತೇವೆ. ಈವರೆಗೂ ನಾನು ದೇವೇಗೌಡರ ಮಾತು ಮೀರಿ ಹೋಗಿಲ್ಲ. ಈಗಾಗಲೇ ದೇವೇಗೌಡರನ್ನು ಭೇಟಿಯಾಗಿ ಚರ್ಚಿಸಿದ್ದೇನೆ. ಎಲ್ಲವನ್ನೂ ಹೇಳಿದ್ದೇನೆ. ಅವರೇ ಅಂತಿಮ ತೀರ್ಮಾನವನ್ನು ಕೈಗೊಳ್ಳುತ್ತಾರೆ ಎಂದು ತಿಳಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular