HomeKarnatakaBIG NEWS: ರೇವಣ್ಣ ಕುಟುಂಬಕ್ಕೆ ಯಾರೋ ತಲೆ ತುಂಬುತ್ತಿದ್ದಾರೆ, ಹಾಸನದಲ್ಲಿ ಭವಾನಿ ರೇವಣ್ಣ ನಿಂತರೆ ಗೆಲ್ಲಲ್ಲ;...

BIG NEWS: ರೇವಣ್ಣ ಕುಟುಂಬಕ್ಕೆ ಯಾರೋ ತಲೆ ತುಂಬುತ್ತಿದ್ದಾರೆ, ಹಾಸನದಲ್ಲಿ ಭವಾನಿ ರೇವಣ್ಣ ನಿಂತರೆ ಗೆಲ್ಲಲ್ಲ; ನೇರವಾಗಿ ಹೇಳಿಕೆ ಕೊಟ್ಟ H.D. ಕುಮಾರಸ್ವಾಮಿ

ಹುಬ್ಬಳ್ಳಿ: ಹಾಸನದಲ್ಲಿ ಜೆಡಿಎಸ್ ಗೆಲ್ಲಿಸಬೇಕು ಎಂಬುದೇ ನನ್ನ ಗುರಿ. ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ನೀಡಲಾಗುವುದು ಎಂಬ ನನ್ನ ನಿಲುವಿನಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಹೆಚ್.ಡಿ. ಕುಮಾರಸ್ವಾಮಿ, ರೇವಣ್ಣ ಎರಡು ಕ್ಷೇತ್ರಗಳ ಟಿಕೆಟ್ ಕೇಳಿಲ್ಲ. ಹಾಸನದಲ್ಲಿ ಕಾರ್ಯಕರ್ತರ ತೀರ್ಮಾನವೇ ಅಂತಿಮ. ವಾಸ್ತವಿಕ ಗ್ರೌಂಡ್ ರಿಯಾಲಿಟಿ ಮೇಲೆ ಟಿಕೆಟ್ ಕೊಡುತ್ತೇವೆ. ಹಾಸನದಲ್ಲಿ ಭವಾನಿ ರೇವಣ್ಣ ಸ್ಪರ್ಧಿಸಿದರೆ ಗೆಲ್ಲುವುದಿಲ್ಲ. ಒಂದುವರೆ ವರ್ಷದ ಹಿಂದೆ ಹಾಸನ ಶಾಸಕರು ನನಗೆ ಸವಾಲು ಹಾಕಿದ್ದರು. ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿ ಗೆಲ್ಲಿಸುತ್ತೇನೆ ಎಂದು ಹೇಳಿದ್ದೆ. ಈ ನಿಲುವಿನಲ್ಲಿ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ರೇವಣ್ಣ ಕುಟುಂಬಕ್ಕೆ ಯಾರೋ ತಲೆ ತುಂಬುತ್ತಿದ್ದಾರೆ. ಶಕುನಿಗಳು ದೇವೇಗೌಡರ ಕುಟುಂಬ ಮುಗಿಸಬೇಕು ಅಂತಿವೆ. ಹಾಸನ ಕ್ಷೇತ್ರದ ವಿಚಾರದಲ್ಲಿ ಕಾರ್ಯಕರ್ತರೇ ತೀರ್ಮಾನ ಕೈಗೊಳ್ಳುತ್ತಾರೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular