
ಕೋಲಾರ ಜಿಲ್ಲೆ ಶಿನಿಗೇನಹಳ್ಳಿಯಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಕುಮಾರಸ್ವಾಮಿ, ಕೆ.ಸಿ. ವ್ಯಾಲಿ ಹೆಸರಲ್ಲಿ ರಮೇಶ್ ಕುಮಾರ್ ಜೇಬು ತುಂಬಿಸಿಕೊಂಡಿದ್ದು, ಆ ಹಣದಲ್ಲಿಯೇ ಅವರು ಚುನಾವಣೆಗೆ ಹೋಗುತ್ತಾರೆ ಎಂದರು.
ನಮ್ಮ ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಶುದ್ಧೀಕರಿಸಿದ ಕುಡಿಯುವ ನೀರು ಕೊಡುತ್ತೇವೆ. ಮೂರನೇ ಹಂತದಲ್ಲಿ ನೀರು ಶುದ್ಧೀಕರಣ ಮಾಡಿ ಶುದ್ಧಕುಡಿಯುವ ನೀರು ಪೂರೈಸುವುದಾಗಿ ಶಪಥ ಮಾಡಿದ್ದೇನೆ ಎಂದು ಹೇಳಿದರು.

